ADVERTISEMENT

ಅನಂತ ಪದ್ಮನಾಭ ವಿಗ್ರಹ ನವೀಕರಣ ಶೀಘ್ರದಲ್ಲಿ: ಮೂಲಗಳು

ಪಿಟಿಐ
Published 20 ಫೆಬ್ರುವರಿ 2026, 14:25 IST
Last Updated 20 ಫೆಬ್ರುವರಿ 2026, 14:25 IST
ಶ್ರೀ ಪದ್ಮನಾಭ ಸ್ವಾಮಿ ದೇಗುಲ
ಶ್ರೀ ಪದ್ಮನಾಭ ಸ್ವಾಮಿ ದೇಗುಲ   

ತಿರುವನಂತಪುರ: ಶ್ರೀ ಅನಂತ ಪದ್ಮನಾಭ ದೇಗುಲದಲ್ಲಿರುವ ಶತಮಾನಗಳ ಹಿಂದಿನ 18 ಅಡಿ ಎತ್ತರದ ಮೂಲ ವಿಗ್ರಹದ ನವೀಕರಣ ಕಾರ್ಯವು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈ ಕಾರ್ಯ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಗಬಹುದು.

ಪ್ರಧಾನ ವಿಗ್ರಹದ ಜೊತೆಗೆ ಇತರ 30 ವಿಗ್ರಹಗಳ ನವೀಕರಣವೂ ನಡೆಯಲಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಸರ್ಪದ ಮೇಲೆ ಮಲಗಿರುವ ಅನಂತಪದ್ಮನಾಭನ ವಿಗ್ರಹದ ನವೀಕರಣವು ಹಿರಿಯ ಶಿಲ್ಪಿಗಳಾದ ಎ.ಆರ್‌ ದುರೈ ಕೃಷ್ಣಸ್ವಾಮಿ ಮತ್ತು ತಿರುಕೋಷ್ಟಿಯೂರು ಮಾಧವನ್‌ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಕುರಿತ ಒಪ್ಪಂದವು ಶುಕ್ರವಾರ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.