ADVERTISEMENT

ಖ್ಯಾತ ಕಲಾವಿದ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ್ ಪೈ ನಿಧನ

ಏಜೆನ್ಸೀಸ್
Published 15 ಮಾರ್ಚ್ 2021, 10:29 IST
Last Updated 15 ಮಾರ್ಚ್ 2021, 10:29 IST
ಲಕ್ಷ್ಮಣ್‌ ಪೈ
ಲಕ್ಷ್ಮಣ್‌ ಪೈ   

ಪಣಜಿ: ಖ್ಯಾತ ವರ್ಣಚಿತ್ರಕಾರ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ್ ಪೈ(95) ಅವರು ಗೋವಾದ ತಮ್ಮ ನಿವಾಸದಲ್ಲಿ ಭಾನುವಾರ ನಿಧನರಾದರು.

ಪದ್ಮಭೂಷಣ, ಪದ್ಮಶ್ರೀ, ನೆಹರೂ ಪ್ರಶಸ್ತಿ, ಮತ್ತು ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಕ್ಷ್ಮಣ್‌ ಪೈ ಅವರಿಗೆ ಲಭಿಸಿದ್ದವು.

ಗೋವಾ ಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವಿರೋಧ ಪಕ್ಷದ ನಾಯಕ ದಿಗಂಬರ್‌ ಕಾಮತ್‌ ಅವರು ಸಂತಾಪ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.