ADVERTISEMENT

ಕವಿ ಖಲಿಲ್‌ ಧಂತೆಜ್ವಿ ನಿಧನ

ಪಿಟಿಐ
Published 4 ಏಪ್ರಿಲ್ 2021, 15:08 IST
Last Updated 4 ಏಪ್ರಿಲ್ 2021, 15:08 IST
ಖಲಿಲ್‌ ಧಂತೆಜ್ವಿ
ಖಲಿಲ್‌ ಧಂತೆಜ್ವಿ   

ವಡೋದರಾ: ಗುಜರಾತ್‌ನ ಖ್ಯಾತ ಕವಿ ಮತ್ತು ಘಜಲ್‌ ಗಾಯಕ ಖಲಿಲ್‌ ಧಂತೆಜ್ವಿ (82) ಭಾನುವಾರ ನಿಧನರಾದರು.

ಇವರ ಮೂಲ ಹೆಸರು ಖಲಿಲ್‌ ಇಸ್ಮಾಯಿಲ್‌. ವಡೋದರಾ ಬಳಿಯ ತಮ್ಮ ಗ್ರಾಮ ‘ಧಂತೆಜ್ವಿ’ಯ ಹೆಸರನ್ನು ತಮ್ಮ ಮೂಲ ಹೆಸರಿನ ಜತೆ ಸೇರಿಸಿಕೊಂಡಿದ್ದರು.

ಹಲವು ಕವಿತೆಗಳು, ಘಜಲ್‌ಗಳನ್ನು ಇವರು ಬರೆದಿದ್ದರು. ಪತ್ರಕರ್ತರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.

ADVERTISEMENT

‘ಕವಿ ಖಲಿಲ್‌ ಅವರ ನಿಧನದಿಂದ ಅಪಾರ ದುಃಖವಾಗಿದೆ. ಅವರ ಕೊಡುಗೆಯನ್ನು ಸದಾ ಸ್ಮರಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.