ADVERTISEMENT

ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ರೇಣುಕಾ ಚೌಧರಿ ನಿರ್ಧಾರ

ಐಎಎನ್ಎಸ್
Published 24 ಮಾರ್ಚ್ 2023, 10:32 IST
Last Updated 24 ಮಾರ್ಚ್ 2023, 10:32 IST
ರೇಣುಕಾ ಚೌಧರಿ
ರೇಣುಕಾ ಚೌಧರಿ    

ನವದೆಹಲಿ: 2018ರಲ್ಲಿ ಸಂಸತ್ತಿನಲ್ಲಿ ಮೋದಿ ತಮ್ಮನ್ನು ಅವಮಾನಿಸಿದ್ದಾರೆ. ಆದ್ದರಿಂದ ಅವರ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ಘೋಷಿಸಿದ ನಂತರ, ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದ್ದಾರೆ.

2018ರಲ್ಲಿ ಸಂಸತ್ತಿನಲ್ಲಿ ಮೋದಿ, ತಮ್ಮ ನಗುವನ್ನು ಹಿಂದೂ ಪುರಾಣದಲ್ಲಿ ಬರುವ ರಾಕ್ಷಸಿ ಪಾತ್ರವಾದ 'ಶೂರ್ಪನಖಿ'ಕ್ಕೆ ಹೋಲಿಸಿದ್ದಾರೆ ಎಂದು ಅವರು ಆರೋಪಿಸಿದರು. ಚೌಧರಿ ಟ್ವಿಟರ್‌ನಲ್ಲಿ ಸದನದ ಕಲಾಪಗಳ ವಿಡಿಯೊವನ್ನು ಸಹ ಶುಕ್ರವಾರ ಪೋಸ್ಟ್ ಮಾಡಿದ್ದಾರೆ.

ADVERTISEMENT

ವಿಡಿಯೊದಲ್ಲಿ, ಸಭಾಪತಿಯನ್ನುದ್ದೇಶಿಸಿ ಮಾತನಾಡುವಾಗ ಮೋದಿ, ‘ರೇಣುಕಾ ಜೀ ಅವರಿಗೆ ಏನನ್ನೂ ಹೇಳಬೇಡಿ ಎಂದು ನಾನು ವಿನಂತಿಸಿಕೊಳ್ಳುತ್ತೇನೆ. ಏಕೆಂದರೆ ರಾಮಾಯಣ ಧಾರಾವಾಹಿಯ ನಂತರ ಇಂದು ಅಂತಹ ನಗುವನ್ನು ಕೇಳಲು ನಾನು ಅದೃಷ್ಟಶಾಲಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

ಮೋದಿ ಭಾಷಣದ ವೇಳೆ ಚೌಧರಿಯ ನಗು ಕೇಳಿದ ಬಳಿಕ ಸಭಾಪತಿ ಚೌಧರಿಯವರಿಗೆ ಮೌನವಾಗಿರುವಂತೆ ಸೂಚಿಸಿದ್ದರು.

ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈಗ ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ಚೌಧರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.