ADVERTISEMENT

ಪಶ್ಚಿಮ ಬಂಗಾಳ: 2 ಮತಗಟ್ಟೆಗಳಲ್ಲಿ ಮರು ಮತದಾನ

ಪಿಟಿಐ
Published 3 ಜೂನ್ 2024, 14:24 IST
Last Updated 3 ಜೂನ್ 2024, 14:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಾರಾಸತ್ ಮತ್ತು ಮಥುರಾಪುರ ಲೋಕಸಭೆ ಕ್ಷೇತ್ರಗಳ ತಲಾ ಒಂದೊಂದು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಿತು.

ಬಾರಾಸತ್ ಕ್ಷೇತ್ರ ವ್ಯಾಪ್ತಿಯ ದೇಗಂಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ 61 ಹಾಗೂ ಮಥುರಾಪುರ ಕ್ಷೇತ್ರ ವ್ಯಾಪ್ತಿಯ ಕಾಕ್‌ದ್ವೀಪ್‌ ವಿಧಾನಸಭಾ ಕ್ಷೇತ್ರದ ಮತಗಟ್ಟೆ 26ರಲ್ಲಿ ಮರು ಮತದಾನ ನಡೆಯಿತು. ಮತದಾನ ಶಾಂತಿಯತವಾಗಿತ್ತು ಎಂದು ವರದಿ ತಿಳಿಸಿದೆ.  

ADVERTISEMENT

ಜಿಲ್ಲಾ ಚುನಾವಣಾ ಅಧಿಕಾರಿಗಳು, ವೀಕ್ಷಕರ ವರದಿಯನ್ನು ಆಧರಿಸಿ ಇಲ್ಲಿ ಮರು ಮತದಾನ ನಡೆಸಲು ಆಯೋಗ ತೀರ್ಮಾನಿಸಿತ್ತು. ಜೂನ್‌ 1ರಂದು ಇಲ್ಲಿ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.