ADVERTISEMENT

ರೈಲಿನಡಿ ಅವಿತು ಪ್ರಯಾಣ; ಸುಳ್ಳು ವರದಿ: ರೈಲ್ವೆ ಸಚಿವಾಲಯ

ಪಿಟಿಐ
Published 28 ಡಿಸೆಂಬರ್ 2024, 15:43 IST
Last Updated 28 ಡಿಸೆಂಬರ್ 2024, 15:43 IST
   

ನವದೆಹಲಿ: ರೈಲಿನ ಚಕ್ರದ ಆಕ್ಸಲ್‌ನಲ್ಲಿ ಅಡಗಿಕೊಂಡ ವ್ಯಕ್ತಿಯೊಬ್ಬರು ಇಟಾರಸಿಯಿಂದ ಜಬಲ್‌ಪುರಕ್ಕೆ 250 ಕಿ.ಮೀ. ದೂರ ಪ್ರಯಾಣಿಸಿದ್ದಾರೆ ಎಂಬ ವರದಿಯನ್ನು ರೈಲ್ವೆ ಸಚಿವಾಲಯವು ಶುಕ್ರವಾರ ತಳ್ಳಿಹಾಕಿದೆ.

ನಿಂತಿದ್ದ ರೈಲಿನ ಚಕ್ರಗಳ ಆಕ್ಸಲ್‌ನಿಂದ ಕೆಳಗಿಳಿದು ಹೊರಬಂದ ವ್ಯಕ್ತಿಯ ವಿಡಿಯೊವನ್ನು ಯಾರೊ ಚಿತ್ರೀಕರಿಸಿದ್ದು, ಟಿಕೆಟ್‌ ಖರೀದಿಗೆ ಹಣವಿಲ್ಲದಿದ್ದರಿಂದ, ಈತ ಬೋಗಿಯ ಕೆಳಗೆ ಅಡಗಿ ಪ್ರಯಾಣಿಸಿದ್ದಾರೆ ಎಂಬ ತಪ್ಪು ಮಾಹಿತಿಯೊಂದಿಗೆ ಪ್ರಸಾರ ಮಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

‘ಈ ವರದಿಯು ಸುಳ್ಳು ಮತ್ತು ಆಧಾರರಹಿತವಾದ್ದದು’ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್‌ ಕುಮಾರ್‌ ತಿಳಿಸಿದ್ದಾರೆ. 

ADVERTISEMENT

‘ನಿಲ್ದಾಣದಲ್ಲಿ ರೈಲು ನಿಂತಿದ್ದಾಗ, ಆ ವ್ಯಕ್ತಿಯು ಚಕ್ರಗಳ ಆಕ್ಸಲ್‌ ಬಳಿ ಅಡಗಿಕೊಂಡಿದ್ದ. ರೈಲು ಚಲಿಸುವಾಗ ಅಲ್ಲಿ ಅವಿತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ’ ಎಂದಿದ್ದಾರೆ.‌

ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.