ADVERTISEMENT

ಗಣರಾಜ್ಯೋತ್ಸವ 2021: ಗಮನಸೆಳೆದ ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ

ದೇಶವು 72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ 3 ಕೃಷಿ ಕಾನೂನುಗಳನ್ನು ರದ್ಧುಪಡಿಸಬೇಕು ಎಂದ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪರೇಡ್‌ ನಡೆಯುವ ರಾಜಪಥ್‌ನಲ್ಲಿ ಸಾವಿರಾರು ಮಂದಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿವರ್ಷ ಪರೇಡ್‌ ವೀಕ್ಷಣೆಗೆ ಲಕ್ಷಾಂತರ ಜನರು ಸೇರುತ್ತಾರೆ. ಆದರೆ ಈ ಬಾರಿ ಕೋವಿಡ್–19 ಮಾರ್ಗಸೂಚಿಗೆ ಅನುಗುಣವಾಗಿ 25 ಸಾವಿರ ಜನರಿಗಷ್ಟೇ ಅವಕಾಶ ನೀಡಲಾಗಿದೆ. ಗಣರಾಜ್ಯೋತ್ಸವ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 14:42 IST
Last Updated 26 ಜನವರಿ 2021, 14:42 IST

ಗಣರಾಜ್ಯೋತ್ಸವ ಪಥಸಂಚಲನ: ಗಮನಸೆಳೆದ ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಮಾದರಿ ಒಳಗೊಂಡ, ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆಯಿತು.

ಸ್ತಬ್ಧಚಿತ್ರದ ಬಹುಪಾಲು ಸ್ಥಳವನ್ನು ರಾಮಮಂದಿರದ ಮಾದರಿ ಆವರಿಸಿದ್ದರೆ, ಮುಂಭಾಗ ಮಹರ್ಷಿ ವಾಲ್ಮೀಕಿ ಕುಳಿತ ಭಂಗಿಯಲ್ಲಿರುವ ಎತ್ತರದ ಮೂರ್ತಿ ಇತ್ತು. ‘ಇದು, ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ ಬಿಂಬಿಸಲಿದೆ’ ಎಂದು ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ತಿಳಿಸಿದರು. ಸಂತರ ವೇಷದಲ್ಲಿದ್ದ ಹಲವರು, ಕರಕುಶಲ ಕಲಾವಿದರು ಇದ್ದರು.

‘ಕೋವಿಡ್‌ ಅಲೆ ತಗ್ಗಿಸುವಲ್ಲಿ ಸರ್ಕಾರ ಯಶಸ್ವಿ’

ಬೆಂಗಳೂರು: ‘ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ. ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ’ ಎಂದು ರಾಜ್ಯಪಾಲ ವಜುಭಾಯಿ​​​ ವಾಲಾ ಹೇಳಿದರು.

ADVERTISEMENT

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿ.ಪಿ.ಇ. ಕಿಟ್, ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶಿತ್ವ ‘ಆತ್ಮ ನಿರ್ಭರ್ ಭಾರತ್’ ಕಾರ್ಯಕ್ರಮದ ದಿಸೆಯಲ್ಲಿ ಉತ್ತಮ ಹೆಜ್ಜೆ’ ಎಂದು ಬಣ್ಣಿಸಿದರು.

‘ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಈ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ಧ ಪಡೆದ ಜಯವಾಗಿದೆ. 2020ರಲ್ಲಿ ಹಿಂದೆಂದೂ ಕಂಡರಿಯದ ಕೋವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ, ನಾವು ನವ ಚೈತನ್ಯ ಮತ್ತು ಆಶೋತ್ತರದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ’ ಎಂದೂ ವಾಲಾ ಹೇಳಿದರು.

ನನ್ನ ಹೃದಯಕ್ಕೆ ಹತ್ತಿರವಾದ ಭಾರತಕ್ಕೆ ಗಣರಾಜ್ಯೋತ್ಸವದ ಶುಭಾಶಯಗಳು: ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

ಗಣತಂತ್ರ ದಿನದ ಪಥಸಂಚಲನದಲ್ಲಿ ಬಾಂಗ್ಲಾ ಸೇನೆ ಭಾಗವಹಿಸಿದ್ದೇಕೆ?

ಸುಕೋಯ್‌–30 ಯುದ್ಧ ವಿಮಾನಗಳಿಂದ ಆಕಾಶದಲ್ಲಿ ’ತ್ರೀಶೂಲ’ ರಚನೆ

ರಾಜ್ಯದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ

ವಾಯುಪಡೆ ಸಾಮಾರ್ಥ್ಯ ಪ್ರದರ್ಶನ

ಇಂಡೋ–ಟಿಬೆಟ್‌ ಸೇನಾ ಸಿಬ್ಬಂದಿಯಿಂದ ಪಾಂಗಾಂಗ್‌ ನದಿ ತೀರದಲ್ಲಿ ಗಣರಾಜ್ಯೋತ್ಸವ

ಲಸಿಕೆ ಅಭಿವೃದ್ಧಿಯ ವಿವಿಧ ಪ್ರಕ್ರಿಯೆಗಳ ಮೇಲೆ ಬೆಳಕು ಚೆಲ್ಲುವ 'ಆತ್ಮ-ನಿರ್ಭರ ಭಾರತ್ ಅಭಿಯಾನ: COVID' ಎಂಬ ವಿಷಯ ಕುರಿತ ಜೈವಿಕ ತಂತ್ರಜ್ಞಾನ ಇಲಾಖೆಯ ಸ್ತಬ್ಧಚಿತ್ರ.

ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

ರಾಮ ಜನ್ಮಭೂಮಿ ಪರಿಕಲ್ಪನೆಯ ಉತ್ತರ ಪ್ರದೇಶ ಸ್ತಬ್ಧಚಿತ್ರ

ಸಿಖ್ಖರ ಧರ್ಮಗುರು ಶ್ರೀ ಗುರು ತೇಜ್‌ ಬಹದ್ದೂರ್‌ ಅವರ ‘400 ನೇ ಜನ್ಮ ವಾರ್ಷಿಕೋತ್ಸವ’ ವಿಷಯವಾಗಿ ಪಂಜಾಬ್‌ನಿಂದ ಬಂದ ಸ್ತಬ್ಧಚಿತ್ರ

ಕರ್ನಾಟಕದಿಂದ ಭಾಗವಹಿಸಿದ ಸ್ತಬ್ಧಚಿತ್ರವು ವಿರೂಪಾಕ್ಷ ದೇಗುಲ, ಹಂಪಿಯ ವಾಸ್ತುಶಿಲ್ಪದ ಅನಾವರಣಗೊಳಿಸಿತು.

ಲಡಾಖ್‌ನಿಂದ ಮೊದಲ ಬಾರಿಗೆ ಸ್ತಬ್ಧಚಿತ್ರ

ಲಡಾಖ್‌ನ ಸಂಸ್ಕೃತಿ ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಪರೇಡ್‌ನಲ್ಲಿ ಪ್ರದರ್ಶಿಸಲಾಯಿತು.

ಮಹಾರಾಷ್ಟ್ರದ ಎನ್‌ಸಿಸಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ ಅವರ ನೇತೃತ್ವದಲ್ಲಿ ಎನ್‌ಸಿಸಿ ಎನ್‌ಸಿಸಿ ಸ್ವಯಂಸೇವಕಿಯರ ಪರೇಡ್‌

ಡಿಆರ್‌ಡಿಒ ಸ್ತಬ್ಧಚಿತ್ರಗಳು

ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್ ಎಂದೂ ಕರೆಯಲಾಗುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ)

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತಿಯಲ್ಲಿ ರಾಜ್ಯಪಾಲ ಜಗದೀಪ್‌ ಧನಕರ್‌ ಅವರಿಂದ ಧ್ವಜಾರೋಹಣ.

ರಾಯಣ್ಣರ ಆದರ್ಶಗಳು ಸಮಾಜಕ್ಕೆ ನಿರಂತರ ಪ್ರೇರಣೆ ನೀಡುತ್ತವೆ: ಬಿಎಸ್‌ವೈ

ಪಿನಾಕ ಮಲ್ಟಿ ಲಾಂಚರ್‌ ರಾಕೆಟ್‌

ಸ್ವಯಂ ಚಾಲಿತ ಬ್ರಹ್ಮೋಸ್‌ ಕ್ಷಿಪಣಿ

ಬಾಂಗ್ಲಾದೇಶದ ಸೇನೆಯು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದೆ.

ಈ ಬಾರಿಯ ಪರೇಡ್‌ ಮುನ್ನಡೆಸುತ್ತಿರುವ ಲೆಫ್ಟಿನಂಟ್‌ ಜನರಲ್‌ ವಿಜಯ್‌ಕುಮಾರ್‌ ಮಿಶ್ರಾ

ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕೃತರಿಂದ ರಾಜಪಥ್‌ನಲ್ಲಿ ಪರೇಡ್‌

ರಾಜಪಥ್‌ನಲ್ಲಿ ಧ್ವಜಾರೋಹಣ

ರಾಜಪಥಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌

ಚಿತ್ರದುರ್ಗ: ಧ್ವಜಾರೋಹಣ ನೆರವೇರಿಸಿದ ಶ್ರೀರಾಮುಲು

ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದರು.

ವಿಜಯಪುರ: ಶಶಿಕಲಾ ಜೊಲ್ಲೆ ರಾಷ್ಟ್ರ ಧ್ವಜಾರೋಹಣ

ವಿಜಯಪುರ ಜಿಲ್ಲಾಡಳಿತವು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಇದ್ದಾರೆ.

ಚಿಕ್ಕಮಗಳೂರು: ಗಣರಾಜ್ಯೋತ್ಸವ ಆಚರಣೆ.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಧ್ವಜಾರೋಹಣ ನೆರವೇರಿಸಿದರು.

ಕರ್ನಾಟಕ: ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಧ್ವಜಾರೋಹಣ

ಸಂದರ್ಶಕರ ಪುಸ್ತಕಕ್ಕೆ ಪ್ರಧಾನಿ ಮೋದಿ ಅವರು ಸಹಿ ಮಾಡುತ್ತಿರುವುದು. ರಕ್ಷಣಾ ಸಚಿವರು, ವಾಯು ಸೇನೆ, ಭೂ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಅಮರ್‌ ಜವಾನ್‌ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಭದ್ರತೆಯ ಕಾರಣದಿಂದಾಗಿ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.

ಗಣರಾಜ್ಯೋತ್ಸವದ ಶುಭಾಶಯ ಕೋರಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್

ಗೂಗಲ್‌ನ ಗಣರಾಜ್ಯೋತ್ಸವದ ಡೂಡಲ್‌ನಲ್ಲಿ ಭಾರತದ ವರ್ಣರಂಜಿತ ಪರಂಪರೆ

ಇಂಡೊ, ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಯೋಧರು ಲಡಾಖ್‌ನಲ್ಲಿ ಹೆಪ್ಪುಗಟ್ಟಿರುವ ನದಿ ನೀರಿನ ಮೇಲೆ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.

ಪರೇಡ್‌ ವೀಕ್ಷಣೆಗಾಗಿ ರಾಜಪಥ್‌ಗೆ ಬಂದಿರುವವರು ಕೋವಿಡ್–19 ಮಾರ್ಗಸೂಚಿಗೆ ಅನುಗುಣವಾಗಿ ಅಂತರ ಪಾಲಿಸಿ ಕುಳಿತಿರುವುದು.

ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದ ನಾಯಕರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಮುಖ್ಯ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಒಡಿಶಾ ರಾಜ್ಯಪಾಲ ಗಣೇಶಿ ಲಾಲ್‌ ಅವರೂ ತಮ್ಮ ನಿವಾಸ/ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಅಧಿಕಾರಿಗಳು ಪರೇಡ್‌ನಲ್ಲಿ ಭಾಗವಹಿಸುವುದು ಕಡ್ಡಾಯ: ಸರ್ಕಾರ

ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿಸಲಾಗಿರುವ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಗೈರಾದವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವಂತೆ ಎಲ್ಲ ಸಚಿವಾಲಯಗಳಿಗೆ ಸರ್ಕಾರ ತಿಳಿಸಿದೆ.

ಕೋವಿಡ್–19 ಸಾಂಕ್ರಾಮಿಕ ಕಾರಣದಿಂದಾಗಿ ರಾಜಪಥ್‌ ಸಮಾರಂಭದಲ್ಲಿ ಆಸನಗಳ ಸಾಮರ್ಥ್ಯವನ್ನು ಕೇವಲ ಶೇ. 25ಕ್ಕೆ ಇಳಿಸಲಾಗಿದೆ ಎಂದು ಸಂಸದೀಯ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತಿವರ್ಷ ಜನವರಿ 26 ರಂದು ರಾಜಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭವು ಪ್ರಮುಖ ರಾಷ್ಟ್ರೀಯ ಕಾರ್ಯವಾಗಿದೆ. ಸಮಾರಂಭದ ಮಹತ್ವವನ್ನು ಪರಿಗಣಿಸಿ, ಆಹ್ವಾನಿತ ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರೇಡ್‌ ಅಂತಿಮ ಹಂತದ ಸಿದ್ಧತೆ

ದೆಹಲಿಯತ್ತ ಹೊರಟ ಟ್ರ್ಯಾಕ್ಟರ್‌ಗಳು

ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್‌ ಸಂಖ್ಯೆಯಲ್ಲಿ ದೆಹಲಿಯತ್ತ ಹೊರಟಿದ್ದಾರೆ. ಎಲ್ಲ ಟ್ರ್ಯಾಕ್ಟರ್‌ಗಳ ಮೇಳೆ ರಾಷ್ಟ್ರ ಧ್ವಜ ಹಾಗೂ ರೈತ ಸಂಘಟನೆಗಳ ಧ್ವಜಗಳನ್ನು ಕಾಣಬಹುದಾಗಿದೆ.

ಗಣರಾಜ್ಯೋತ್ಸವ ಪರೇಡ್‌ ಮುಗಿದ ಬಳಿಕ ಟ್ರ್ಯಾಕ್ಟರ್‌ ರ‍್ಯಾಲಿ ಆರಂಭವಾಗಲಿದೆ.

ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ: ಬಿಎಸ್‌ವೈ

‘ನಾಡಿನ ಸಮಸ್ತ ಜನತೆಗೆ 72ನೇ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು. ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿಹಿಡಿಯೋಣ’ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕರೆ ನೀಡಿದ್ದಾರೆ.

150 ಅಡಿ ಧ್ವಜಸ್ತಂಭದಲ್ಲಿ ಧ್ವಜಾರೋಹಣ: ವಿಜಯನಗರ ವಿಜಯೋತ್ಸವಕ್ಕೆ ಸಿದ್ಧತೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಭಾಶಯ

ಪರೇಡ್ ಬೆಳಿಗ್ಗೆ 9ಕ್ಕೆ

ಗಣರಾಜ್ಯೋತ್ಸವ ಅಂಗವಾಗಿ ರಾಜಪಥ್‌ನಲ್ಲಿ ನಡೆಯಲಿರುವ ಪರೇಡ್‌ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ.

ಪ್ರಧಾನಿ ಮೋದಿ ​ಶುಭಾಶಯ

ಭಾರತದ ಎಲ್ಲ ಪ್ರಜೆಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಅಪಾಯ ಎದುರಿಸಲು ದೇಶ ಸನ್ನದ್ಧವಾಗಿದೆ: ಕೋವಿಂದ್

ನವದೆಹಲಿ: ‘ಭಾರತವು ಶಾಂತಿಗೆ ಬದ್ಧವಾಗಿದೆ. ಆದರೆ, ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿವೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗಣರಾಜ್ಯೋತ್ಸವದ ಮುನ್ನಾದಿನದ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.