ADVERTISEMENT

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರಿಗೆ ಆಶ್ರಯ: ಆಸ್ತಿ ಜಪ್ತಿ

ಪಿಟಿಐ
Published 24 ಜುಲೈ 2025, 16:31 IST
Last Updated 24 ಜುಲೈ 2025, 16:31 IST
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ ಪ್ರದೇಶ (ಸಾಂದರ್ಭಿಕ ಚಿತ್ರ)
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ ಪ್ರದೇಶ (ಸಾಂದರ್ಭಿಕ ಚಿತ್ರ)   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸಿದ್ದ ವಸತಿ ಕಟ್ಟಡವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಾನೂನುಬಾಹಿರ ಹಾಗೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಭಯೋತ್ಪಾದಕರಿಗೆ ಆಶ್ರಯ ಹಾಗೂ ಸಂಚಾರಕ್ಕೆ ಬೆಂಬಲ ನೀಡಿದ ಕಾರಣಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.

ರೆಬಾನ್‌ ರಾಮ್‌ಹಮ್‌ನಲ್ಲಿ ಒಂದು ಅಂತಸ್ತಿನ ಮನೆ, ಮೂರು ಕನಾಲ್‌ ಹಾಗೂ ಮೂರು ಮಾರ್ಲಾ ಜಾಗವನ್ನು ಒಳಗೊಂಡಿದೆ. ಈ ಆಸ್ತಿಯು ಉತ್ತರ ಕಾಶ್ಮೀರ ಜಿಲ್ಲೆಯ ಸೋಪೋರ್‌ನ ರೆಬಾನ್‌ ಪ್ರದೇಶದ ನಿವಾಸಿ ಜಾವೇದ್‌ ಅಹಮದ್‌ ದಾರ್‌ ಅವರ ಮಾಲೀಕತ್ವದಲ್ಲಿದೆ ಎಂದು ಪೊಲೀಸ್‌ ವಕ್ತಾರ ತಿಳಿಸಿದ್ದಾರೆ.

ADVERTISEMENT

ಈ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದಕರಿಗೆ ಆಶ್ರಯ ನೀಡಲು ಹಾಗೂ ಅವರ ವಾಸ್ತವ್ಯಕ್ಕೆ ಅನುಕೂಲಕರವಾಗಿ ಬಳಸಿರುವುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ. ಈ ಮೂಲಕ ಸೋಪೋರ್‌ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಹಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.