ADVERTISEMENT

ಕಾಶ್ಮೀರದಲ್ಲಿ ನಿಲ್ಲದ ಹತ್ಯೆ, ಕೇಂದ್ರದ ವಿರುದ್ಧ ಅಸಮಾಧಾನ: ಅಧಿಕಾರಿ ರಾಜೀನಾಮೆ

ಪಿಟಿಐ
Published 9 ಜನವರಿ 2019, 20:00 IST
Last Updated 9 ಜನವರಿ 2019, 20:00 IST

ಶ್ರೀನಗರ: 2010ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದ ಜಮ್ಮು ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೇಸಲ್, ಸರ್ಕಾರಿ ಸೇವೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.

‘ಕಾಶ್ಮೀರದಲ್ಲಿ ನಿಲ್ಲದ ಹತ್ಯೆಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರದ ಅಪ್ರಾಮಾಣಿಕತೆ ವಿರುದ್ಧ ಪ್ರತಿಭಟನಾ ರೂಪವಾಗಿ ಈ ರಾಜೀನಾಮೆ ನೀಡಿದ್ದೇನೆ’ ಎಂದು 35 ವರ್ಷದ ಫೇಸಲ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸುಮಾರು 20 ಕೋಟಿ ಭಾರತೀಯ ಮುಸ್ಲಿಮರನ್ನು ಹಿಂದುತ್ವ ಶಕ್ತಿಗಳು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿವೆ. ಅಸಹಿಷ್ಣುತೆ ಸಂಸ್ಕೃತಿ ಹೆಚ್ಚುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

**

ರಾಜಕೀಯ ರಂಗಕ್ಕೆ ಬರುವುದಾದರೆ ಫೇಸಲ್‌ಗೆ ಸ್ವಾಗತ.
–ಒಮರ್ ಅಬ್ದುಲ್ಲ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.