ADVERTISEMENT

ಆರ್‌.ಜಿ.ಕರ್‌ ಪ್ರಕರಣ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸಂತ್ರಸ್ತೆಯ ತಂದೆ

ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ– ಕೊಲೆ ಪ್ರಕರಣ

ಪಿಟಿಐ
Published 15 ಆಗಸ್ಟ್ 2025, 15:18 IST
Last Updated 15 ಆಗಸ್ಟ್ 2025, 15:18 IST
   

ಕೋಲ್ಕತ್ತ: ದುಷ್ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಲು ತಮ್ಮ ವಕೀಲರಿಗೆ ಅನುಮತಿ ನಿರಾಕರಿಸಿದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ, ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸಂತ್ರಸ್ತೆಯ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

‘ಕಳೆದ ವರ್ಷ ಆ. 9ರಂದು ನಡೆದ ದುಷ್ಕೃತ್ಯದ ವೇಳೆ ಅಪರಾಧಿ ಸಂಜಯ್ ರಾಯ್‌ ಜೊತೆಗೆ ಇತರ ವ್ಯಕ್ತಿಗಳು ಅಲ್ಲಿದ್ದರು ಎಂಬುದು ನನ್ನ ದೃಢ ನಂಬಿಕೆಯಾಗಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ಮುಂದಿನ ವಾರದ ಆರಂಭದಲ್ಲಿ ಹೈಕೋರ್ಟ್‌ನ ಏಕಪೀಠವು ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ADVERTISEMENT

‘ತನಿಖೆಯ ನಂತರವೂ ಪತ್ತೆಯಾಗದ ಗಮನಾರ್ಹ ಲೋಪಗಳನ್ನು ಶೋಧಿಸಿ, ನ್ಯಾಯಾಲಯಕ್ಕೆ ಪೂರಕ ಮಾಹಿತಿ ಒದಗಿಸಲುದುಷ್ಕೃತ್ಯ ನಡೆದ ಸ್ಥಳದ ಸ್ವತಂತ್ರ ಪರೀಕ್ಷೆ ನಡೆಯಬೇಕಿದೆ. ಹೀಗಾಗಿ ತಮ್ಮ ವಕೀಲ ಫಿರೋಜ್‌ ಎಡ್ಜುಲಿ ಮತ್ತು ಆರು ಕಿರಿಯ ವಕೀಲರಿಗೆ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಎರಡು ಗಂಟೆ ಕಾಲ ಭೇಟಿ ನೀಡಲು ಅವಕಾಶ ಕೊಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.