ADVERTISEMENT

ರಿಯಾ ಚಕ್ರವರ್ತಿ ಬಿಡುಗಡೆಗೆ ಅಧೀರ್‌ ಚೌಧರಿ ಒತ್ತಾಯ

ಪಿಟಿಐ
Published 4 ಅಕ್ಟೋಬರ್ 2020, 14:59 IST
Last Updated 4 ಅಕ್ಟೋಬರ್ 2020, 14:59 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ಕೋಲ್ಕತ್ತ: ನಟಿ ರಿಯಾ ಚಕ್ರವರ್ತಿಗೆ ಅವರಿಗೆ ಮತ್ತಷ್ಟು ಕಿರುಕುಳ ನೀಡದೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್‌ ಚೌಧರಿ ಭಾನುವಾರ ಒತ್ತಾಯಿಸಿದ್ದಾರೆ.

‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಕೊಲೆಯಲ್ಲ. ಅದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ’ ಎಂದು ಏಮ್ಸ್‌ನ ವೈದ್ಯಕೀಯ ತಂಡ ವರದಿ ನೀಡಿದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.

‘ರಿಯಾ ಚಕ್ರವರ್ತಿ ರಾಜಕೀಯ ಪಿತೂರಿಯ ಬಲಿಪಶು ಆಗಿದ್ದಾಳೆ. ಸುಶಾಂತ್‌ ಸಾವಿನ ನೋವು ಎಲ್ಲರಿಗೂ ಇದೆ. ಆದರೆ, ಮಹಿಳೆಯೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸುವುದರಿಂದ ಸುಶಾಂತ್‌ಗೆ ಗೌರವ ಸಲ್ಲಿಸಿದಂತೆ ಆಗುವುದಿಲ್ಲ. ರಿಯಾ ಮುಗ್ಧೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.