ADVERTISEMENT

26 ವಾರದ ಭ್ರೂಣ ತೆಗೆಸಿಕೊಳ್ಳಲು ಕೋರ್ಟ್‌ ಅನುಮತಿ

ಪಿಟಿಐ
Published 31 ಮಾರ್ಚ್ 2025, 13:38 IST
Last Updated 31 ಮಾರ್ಚ್ 2025, 13:38 IST
26 ವಾರದ ಅಸಹಜ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌
26 ವಾರದ ಅಸಹಜ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌   

ಮುಂಬೈ: ಅಸ್ಥಿಪಂಜರ ಸಂಬಂಧಿ ತೊಂದರೆ ಇದ್ದ ತನ್ನ 26 ವಾರದ ಭ್ರೂಣವನ್ನು ತೆಗೆಸಿಕೊಳ್ಳಲು 32 ವರ್ಷದ ಮಹಿಳೆಯೊಬ್ಬರಿಗೆ ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದೆ. ‘ಇದು ಮಹಿಳೆಯೊಬ್ಬರ ಸಂತಾನೋತ್ಪತ್ತಿ ಸ್ವಾತಂತ್ರ್ಯ ಮತ್ತು ಇದು ದೇಹದ ಮೇಲಿನ ಮಹಿಳೆಯರ ಹಕ್ಕು’ ಎಂದು ಕೋರ್ಟ್‌ ತೀರ್ಪು ನೀಡಿದೆ. 

ಮಹಿಳೆ ತನ್ನಿಚ್ಛೆಯ ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಆ ಆಸ್ಪತ್ರೆಯು ವೈದ್ಯಕೀಯ ಗರ್ಭಪಾತ ಕಾಯ್ದೆ ಅನ್ವಯ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದೂ ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಹಾಗೂ ನೀಲಾ ಗೋಖಲೆ ಅವರು ಮಾರ್ಚ್‌ 28ರಂದು ಈ ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT