ADVERTISEMENT

ಶ್ರೀಲಂಕಾ: ಅದಾನಿ ವಿರುದ್ಧದ ಅರ್ಜಿ ಹಿಂದಕ್ಕೆ

ಪಿಟಿಐ
Published 18 ಮಾರ್ಚ್ 2025, 15:59 IST
Last Updated 18 ಮಾರ್ಚ್ 2025, 15:59 IST
   

ಕೊಲಂಬೊ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಯೋಜನೆಗಳ ವಿರುದ್ಧ ಶ್ರೀಲಂಕಾದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆರೋಪದ ಅಡಿ ಸಲ್ಲಿಸಲಾಗಿದ್ದ ಐದು ಅರ್ಜಿಗಳನ್ನು ಹಿಂಪಡೆಯಲಾಗಿದೆ.

ಪವನ ವಿದ್ಯುತ್ ಯೋಜನೆಗಳನ್ನು ರದ್ದುಪಡಿಸಲು ತೀರ್ಮಾನಿಸಿದ್ದರ ಬಗ್ಗೆ ಕಂಪನಿಯು ಶ್ರೀಲಂಕಾದ ಹೂಡಿಕೆ ಮಂಡಳಿಗೆ ಮಾಹಿತಿ ನೀಡಿರುವ ಬಗ್ಗೆ ಅಟಾರ್ನಿ ಜನರಲ್ ತಿಳಿಸಿದ ನಂತರ ಅರ್ಜಿದಾರರು ಅರ್ಜಿಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ಶ್ರೀಲಂಕಾದ ಎರಡು ಸ್ಥಳಗಳಲ್ಲಿನ ಪವನ ವಿದ್ಯುತ್ ಯೋಜನೆಗಳಿಂದ ಹಿಂದೆ ಸರಿಯುತ್ತಿರುವುದಾಗಿ ಅದಾನಿ ಸಮೂಹವು ಕಳೆದ ತಿಂಗಳು ತಿಳಿಸಿತ್ತು.

ADVERTISEMENT

ಶ್ರೀಲಂಕಾದ ಹಿಂದಿನ ಸಂಪುಟವು ಈ ಯೋಜನೆಗಳಿಗೆ ಕಳೆದ ವರ್ಷದ ಮೇ ತಿಂಗಳಲ್ಲಿ ಅನುಮೋದನೆ ನೀಡಿತ್ತು. ಇದಾದ ನಂತರ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಯೋಜನೆಗಳಿಂದಾಗಿ ಪರಿಸರಕ್ಕೆ ಧಕ್ಕೆ ಆಗುತ್ತದೆ, ಯೋಜನೆಗಳಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಅರ್ಜಿದಾರರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.