ADVERTISEMENT

ಹಗರಣಗಳೇ ಆರ್‌ಜೆಡಿ ಸರ್ಕಾರದ ಮಾದರಿ: ಬಿಜೆಪಿ ಕಿಡಿ

ಪಿಟಿಐ
Published 13 ಅಕ್ಟೋಬರ್ 2025, 16:14 IST
Last Updated 13 ಅಕ್ಟೋಬರ್ 2025, 16:14 IST
ರವಿ ಶಂಕರ್‌ ಪ್ರಸಾದ್‌
ರವಿ ಶಂಕರ್‌ ಪ್ರಸಾದ್‌   

ನವದೆಹಲಿ: ಹಗರಣಗಳನ್ನು ಮಾಡುವುದು, ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗುವುದು ಹಾಗೂ ಜನರಿಗೆ ಉದ್ಯೋಗದ ಭರವಸೆ ನೀಡಿ ಅವರ ಜಮೀನನ್ನು ಕಬಳಿಸುವುದು ಆರ್‌ಜೆಡಿ ಆಡಳಿತದ ಮಾದರಿಯಾಗಿದೆ ಎಂದು ಬಿಜೆಪಿ ಸೋಮವಾರ ಕಿಡಿಕಾರಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ‘ಮೇವು ತಿನ್ನುವುದು (ಮೇವು ಹಗರಣ), ಡಾಂಬರು ಕುಡಿಯುವುದು ಮತ್ತು ಬಡವರ ಭೂಮಿಯನ್ನು ಕಬಳಿಸುವುದು ಆರ್‌ಜೆಡಿ ಸರ್ಕಾರದ ಮಾದರಿಯಾಗಿದೆ’ ಎಂದು ಆರೋಪಿಸಿದರು. 

‘ತೇಜಸ್ವಿಯ ಉದ್ಯೋಗ ಭರವಸೆಯನ್ನು ನಂಬಬೇಡಿ, ನಂಬಿದರೆ ನಿಮ್ಮ ಭೂಮಿ ಕಳೆದುಕೊಳ್ಳುತ್ತೀರಿ’ ಎಂದು ಜನರಿಗೆ ಮನವಿ ಮಾಡಿದರು. 

ADVERTISEMENT

ಐಆರ್‌ಸಿಟಿಸಿ ಹಗರಣದಲ್ಲಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಪತ್ನಿ ರಾಬ್ಡಿ ದೇವಿ ಮತ್ತು ಇವರ ಪುತ್ರ, ತೇಜಸ್ವಿ ಯಾದವ್‌ ಅವರ ಮೇಲೆ ಇಲ್ಲಿನ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿತು. ಅದರ ಬೆನ್ನಲ್ಲೇ ರವಿಶಂಕರ್‌ ಪ್ರಸಾದ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.