ADVERTISEMENT

ರೈಲು ಪ್ರಯಾಣಿಕರಿಗೆ ಗುರುತುಪತ್ರವಾಗಿ ಡಿಜಿಟಲ್‌ ಆಧಾರ್‌, ಚಾಲನಾ ಪರವಾನಗಿ

ಪಿಟಿಐ
Published 5 ಜುಲೈ 2018, 20:03 IST
Last Updated 5 ಜುಲೈ 2018, 20:03 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್‌ ಕಾಯ್ದಿರಿಸಿ ಪ್ರಯಾಣಿಸುವವರು ಸರ್ಕಾರದ ಡಿಜಿ ಲಾಕರ್‌ನಲ್ಲಿರುವ ಡಿಜಿಟಲ್‌ ಆಧಾರ್‌ ಕಾರ್ಡ್‌ ಮತ್ತು ಚಾಲನಾ ಪರವಾನಗಿ ಚೀಟಿಯನ್ನು ಗುರುತಿನ ಚೀಟಿಯಾಗಿ ತೋರಿಸಬಹುದು.

ಈ ಸಂಬಂಧ ರೈಲ್ವೆಯ ಎಲ್ಲಾ ವಿಭಾಗೀಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಪತ್ರ ರವಾನಿಸಲಾಗಿದೆ.

‘ಯಾವುದೇ ಪ್ರಯಾಣಿಕರು ತಮ್ಮ ಡಿಜಿ ಲಾಕರ್‌ಗೆ ಲಾಗಿನ್‌ ಆಗಿ ಆಧಾರ್ ಕಾರ್ಡ್‌ ಮತ್ತು ಚಾಲನಾ ಪರವಾನಗಿಯ ಸಾಫ್ಟ್‌ ಕಾಪಿಯನ್ನು ತೋರಿಸಿದರೆ, ಅದನ್ನು ಅಧಿಕೃತ ಗುರುತು ಪತ್ರ ಎಂದು ಪರಿಗಣಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಯಾಣಿಕರು ತಾವೇ ಅಪ್‌ಲೋಡ್‌ ಮಾಡಿದ ದಾಖಲೆಗಳು ‘ಅಪ್‌ಲೋಡೆಡ್‌’ ವಿಭಾಗದಲ್ಲಿ ಇದ್ದರೆ ಅವುಗಳನ್ನು ಅಧಿಕೃತ ಗುರುತಿನ ಪತ್ರಗಳು ಎಂದು ಪರಿಗಣಿಸಲಾಗುವುದಿಲ್ಲ.

ನರೇಂದ್ರ ಮೋದಿ ಅವರ ‘ಡಿಜಿಟಲ್‌ ಇಂಡಿಯಾ ಚಳವಳಿ’ಯ ಭಾಗವಾಗಿ ಡಿಜಿ ಲಾಕರ್ ಸೌಲಭ್ಯ ಆರಂಭಿಸಲಾಗಿದೆ. ಇದನ್ನು ಸರ್ಕಾರ ನಿರ್ವಹಿಸುತ್ತಿದ್ದು, ಸದ್ಯ ಇದರಲ್ಲಿ ಚಾಲನಾ ಪರವಾನಗಿ ಮತ್ತು ಆಧಾರ್ ಅನ್ನು ಸಂಗ್ರಹಿಸಿ ಇಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.