ADVERTISEMENT

ಅಕ್ರಮ ಹಣ ವರ್ಗಾವಣೆ: ವಿಚಾರಣೆಗೆ ರಾಬರ್ಟ್ ವಾದ್ರಾ ಗೈರು

appears before ED again

​ಪ್ರಜಾವಾಣಿ ವಾರ್ತೆ
Published 31 ಮೇ 2019, 15:32 IST
Last Updated 31 ಮೇ 2019, 15:32 IST
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ   

ನವದೆಹಲಿ (ಪಿಟಿಐ):ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ರಾಬರ್ಟ್ ವಾದ್ರಾ ಗೈರು ಹಾಜರಾಗಿದ್ದಾರೆ.

ಆರೋಗ್ಯ ಸಮಸ್ಯೆಯಿರುವುದರಿಂದ ಹಾಜರಾಗುತ್ತಿಲ್ಲ ಎಂದುಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ತಿಳಿಸಿದ್ದು, ಮುಂದಿನ ವಿಚಾರಣೆ ನಿಗದಿಗೊಳಿಸುವಂತೆ ಕೋರಿದ್ದಾರೆ.

ಲಂಡನ್‌ನಲ್ಲಿ ನಿವೇಶನ ಖರೀದಿಸಿರುವ ವೇಳೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧಪ್ರಕರಣಗಳನ್ನು ಅವರುಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಮತ್ತು ವಿದೇಶ ಪ್ರಯಾಣ ಅನುಮತಿ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.ತನಿಖೆಗೆ ನಿರೀಕ್ಷಿತ ಮಟ್ಟದಲ್ಲಿ ವಾದ್ರಾ ಸಹಕರಿಸುತ್ತಿಲ್ಲ. ಹೀಗಾಗಿ ಅವರ ಅರ್ಜಿಯನ್ನುನ್ಯಾಯಾಲಯ ರದ್ದುಪಡಿಸಬೇಕು ಎಂದು ಇ.ಡಿ ಕೋರಿದೆ. ಇದೇ 3ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.

ADVERTISEMENT

ಗುರುವಾರ ನಡೆದ ವಿಚಾರಣೆ ಕುರಿತು ಜಾಲತಾಣದಲ್ಲಿ ವಾದ್ರಾ ಬರೆದುಕೊಂಡಿದ್ದರು. ‘ಇದು11ನೇ ವಿಚಾರಣೆಯಾಗಿದ್ದು, ಇದುವರೆಗೂ ಇ.ಡಿ ಜೊತೆ 70 ಗಂಟೆ ಕಳೆದಿದ್ದೇನೆ. ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇನೆ.ಎಲ್ಲ ಆರೋಪಗಳಿಂದ ಮುಕ್ತನಾಗುತ್ತೇನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.