ADVERTISEMENT

ಫಿನ್‌ಟೆಕ್‌ನಲ್ಲಿ ಭಾಗವಹಿಸಿದ ಮಾನವರೂಪಿ ರೊಬೊಟ್‌ ‘ಸೋಫಿಯಾ’

ಏಜೆನ್ಸೀಸ್
Published 22 ಅಕ್ಟೋಬರ್ 2018, 15:11 IST
Last Updated 22 ಅಕ್ಟೋಬರ್ 2018, 15:11 IST
robot Sophia
robot Sophia   

ವಿಶಾಖಪಟ್ಟಣ: ಆಂಧ್ರಪ್ರದೇಶ ಸರ್ಕಾರವು ಹಣಕಾಸು ನೆರವಿಗಾಗಿ ಆಯೋಜಿಸಿರುವ ತಂತ್ರಜ್ಞಾನ ಮೇಳ ‘ವೈಝಾಗ್‌ ಫಿನ್‌ಟೆಕ್‌’ನಲ್ಲಿ ವಿಶ್ವದ ಮೊದಲ ಮಾನವರೂಪಿ ರೊಬೊಟ್‌ ‘ಸೋಫಿಯಾ’ ಭಾಗವಹಿಸುವ ಮೂಲಕ ಮೇಳದ ಆಕರ್ಷಣೆ ಹೆಚ್ಚಿಸಿದೆ.

ಸೌದಿ ಅರೇಬಿಯಾದ ಮಾನವರೂಪಿ ರೊಬೊಟ್‌ ‘ಸೋಫಿಯಾ’ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಮೇಳದಲ್ಲಿ ಭಾಗವಹಿಸಿದೆ. 2015ರ ಏಪ್ರಿಲ್‌ 19ರಿಂದ ಕ್ರಿಯಾಶೀಲವಾಗಿರುವ ‘ಸೋಫಿಯಾ’ 62ಕ್ಕೂ ಹೆಚ್ಚು ಮಾನವ ಮುಖಭಾವಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ.

ಐದು ದಿನಗಳ ಈ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಸಿಂಗಪುರ ಮೂಲದ ಸಿಂಗ್‌ಎಕ್ಸ್‌ ಕಂಪನಿಯ ಸಹಯೋಗದೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗಿದೆ. ದೇಶದಲ್ಲಿಯೇ ಅತಿದೊಡ್ಡ ಫಿನ್‌ಟೆಕ್‌ ಉತ್ಸವ ಇದಾಗಿದ್ದು, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿನ ತಂತ್ರಜ್ಞರು, ಹೂಡಿಕೆದಾರರು ಹಾಗೂ ಹಲವು ಕಂಪನಿಗಳ ಸಿಇಒಗಳು ಭಾಗವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.