ADVERTISEMENT

18ನೇ ಬಾರಿ ಗಣರಾಜ್ಯ ಪರೇಡ್‌ಗೆ ‘ರಿಯೊ’ ಕುದುರೆ

ಪಿಟಿಐ
Published 25 ಜನವರಿ 2021, 8:22 IST
Last Updated 25 ಜನವರಿ 2021, 8:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜೋತ್ಸವದ ಪರೇಡ್‌ನಲ್ಲಿ 61ನೇ ಅಶ್ವದಳದ ‘ರಿಯೊ’ ಕುದುರೆ18ನೇ ಬಾರಿಗೆ ಭಾಗವಹಿಸಲಿದೆ.

‘ರಿಯೋ ಕುದುರೆಗೆ ಈಗ 22 ವಯಸ್ಸು. ಹನೋವೇರಿಯನ್ ತಳಿಯ ಈ ಕುದುರೆ ನಾಲ್ಕನೇ ವಯಸ್ಸಿನಿಂದಲೂ ಗಣರಾಜೋತ್ಸವದ ಪರೇಡ್‌ನಲ್ಲಿ ಭಾಗವಹಿಸುತ್ತಿದೆ’ ಎಂದು ಕ್ಯಾಪ್ಟನ್‌ ದೀಪಾಂಶು ಶೂರನ್ ಅವರು ತಿಳಿಸಿದ್ದಾರೆ.

ಮೌಂಟೆಡ್‌ ಕ್ಯಾವಲ್ರಿ ರಿಜಿಮೆಂಟ್‌ ಸದ್ಯ ವಿಶ್ವದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ರೆಜಿಮಂಟ್ ಆಗಿದೆ. ‘ರಿಯೋ’ ನೇತೃತ್ವದ ತುಕಡಿಯನ್ನುದೀಪಾಂಶು ಅವರು ಮೂರನೇ ಬಾರಿ ಮುನ್ನಡೆಸಲಿದ್ದಾರೆ.

ADVERTISEMENT

‘ರಿಯೋ’ ವಿಶೇಷ ಕುದುರೆಯಾಗಿದೆ. ಅದಕ್ಕೆ ಕಮಾಂಡರ್‌ನ ಮಾತುಗಳು ಅರ್ಥವಾಗುತ್ತದೆ. ರಿಯೋ 61ನೇ ಅಶ್ವದಳದ ಸದಸ್ಯನಾಗಿ 18ನೇ ಬಾರಿ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. 15ನೇ ಬಾರಿ ಕಮಾಂಡರ್‌ ಅನ್ನು ಬೆನ್ನಮೇಲೆ ಕೂರಿಸಿ ಭಾಗಿಯಾಗಲಿದ್ದಾನೆ ಎಂದು ದೀಪಾಂಶು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.