ADVERTISEMENT

ರಾಮನ ಜತೆಗೆ ‘ರೊಟ್ಟಿ’ಯೂ ಬೇಕು: ದತ್ತಾತ್ರೇಯ ಹೊಸಬಾಳೆ

ಪಿಟಿಐ
Published 12 ಡಿಸೆಂಬರ್ 2022, 18:43 IST
Last Updated 12 ಡಿಸೆಂಬರ್ 2022, 18:43 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ   

ಭೋಪಾಲ್: ಭಗವಾನ್ ರಾಮನ ಜತೆಗೆ ‘ರೊಟ್ಟಿ’ ಅಂದರೆ ಕೈಗಾರಿಕೆಗಳು, ಸಂಪತ್ತು ಮತ್ತು ಉದ್ಯೋಗಗಳೂ ದೇಶಕ್ಕೆ ಬೇಕಾಗಿದ್ದು ಎರಡೂ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೋಮವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಮಧ್ಯಭಾರತ ಪ್ರಾಂತದಲ್ಲಿ (ಕೇಂದ್ರ ಭಾರತ) ಸ್ಥಾಪಿಸಲಾದ 16 ಉದ್ಯೋಗ ಸೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,‘ದೇಶದ ಹೆಮ್ಮೆ ಮತ್ತು ಸಂಸ್ಕೃತಿಗಾಗಿ, ಅಯೋಧ್ಯೆಯಲ್ಲಿ ರಾಮನಿಗೆ ಮಂದಿರವನ್ನು ನಿರ್ಮಿಸಬೇಕು ಎಂಬ ಭಾವನೆ ದೇಶದ ಜನರ ಆಶಯವಾಗಿತ್ತು. ಪ್ರತಿ ಪಥದಲ್ಲೂ ದೇವಾಲಯಗಳಿವೆ. ಆದರೆ ದೇಶದ ಜನರು ಅಯೋಧ್ಯೆಯಲ್ಲೇ ರಾಮಮಂದಿರ ಕಟ್ಟಬೇಕೆಂಬ ಆಕಾಂಕ್ಷೆ ಹೊಂದಿದ್ದರು. ಏಕೆಂದರೆ ಅದು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಭಾವನೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಮಧ್ಯಕ್ಷೇತ್ರವು ಮಧ್ಯಭಾರತ, ಮಾಳ್ವಾ, ಮಹಾಕೋಶಲ್ ಮತ್ತು ಛತ್ತೀಸಗಢ ಪ್ರಾಂತ್ಯವನ್ನೊಳಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.