
ಪ್ರಜಾವಾಣಿ ವಾರ್ತೆ
ವಿಮಾನ ಅಪಘಾತ
ಚಿತ್ರ: ಪಿಟಿಐ
ಭುವನೇಶ್ವರ: ರೂರ್ಕೆಲಾ ಬಳಿ ಶನಿವಾರ ಸಣ್ಣ ವಿಮಾನ ಅಪಘಾತಕ್ಕೀಡಾದ ಪ್ರಕರಣದ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆಯ ಮೂವರು ಸದಸ್ಯರ ತಂಡ ಭಾನುವಾರ ತನಿಖೆ ಆರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಇಂಡಿಯಾ ಒನ್’ ವಿಮಾನವು ತುರ್ತು ಅಪಘಾತಕ್ಕೀಡಾಗಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದರು.
ವಿಮಾನ ಅಪಘಾತಕ್ಕೀಡಾದ ಪ್ರದೇಶದ ವೈಮಾನಿಕ ವೀಕ್ಷಣೆಯನ್ನು ಎಎಐಬಿ ತಂಡ ಈಗಾಗಲೇ ಮಾಡಿದೆ ಎಂದು ಒಡಿಶಾ ಸರ್ಕಾರದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಷಾ ಪಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.