ADVERTISEMENT

ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ಹಳಿಯಲ್ಲಿ ಮೆಟ್ರೊ, ಆರ್‌ಆರ್‌ಟಿಸಿ ರೈಲು

ಪಿಟಿಐ
Published 11 ಸೆಪ್ಟೆಂಬರ್ 2025, 16:09 IST
Last Updated 11 ಸೆಪ್ಟೆಂಬರ್ 2025, 16:09 IST
ಆರ್‌ಆರ್‌ಟಿಎಸ್‌ ರೈಲು ಮತ್ತು ಮೀರಟ್‌ ಮೆಟ್ರೊ ರೈಲು ಒಂದೇ ತಾಂತ್ರಿಕತೆಯಿಂದ ನಿರ್ಮಿಸಿರುವ ಹಳಿಗಳ ಮೇಲೆ ಸಂಚರಿಸಿದವು
– ಚಿತ್ರಕೃಪೆ: ಎನ್‌ಸಿಆರ್‌ಟಿಸಿ
ಆರ್‌ಆರ್‌ಟಿಎಸ್‌ ರೈಲು ಮತ್ತು ಮೀರಟ್‌ ಮೆಟ್ರೊ ರೈಲು ಒಂದೇ ತಾಂತ್ರಿಕತೆಯಿಂದ ನಿರ್ಮಿಸಿರುವ ಹಳಿಗಳ ಮೇಲೆ ಸಂಚರಿಸಿದವು – ಚಿತ್ರಕೃಪೆ: ಎನ್‌ಸಿಆರ್‌ಟಿಸಿ   

ನವದೆಹಲಿ: ನಗರಗಳಿಂದ ನಗರಗಳಿಗೆ ಅಥವಾ ನಗರ ಪ್ರದೇಶದ ಸುತ್ತಮುತ್ತಲ ಊರುಗಳಿಗೆ ವೇಗವಾಗಿ ಸಂಚರಿಸುವ ‘ರೀಜನಲ್‌ ರ್‍ಯಾಪಿಡ್‌ ಟ್ರಾನ್‌ಸ್ಟಿಟ್‌ ಸಿಸ್ಟಮ್‌ನ (ಆರ್‌ಆರ್‌ಟಿಎಸ್‌) ರೈಲುಗಳು ಮತ್ತು ಮೀರಠ್ ಮೆಟ್ರೊ ರೈಲುಗಳು ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ಹಳಿಗಳ ಮೇಲೆ ಸಂಚರಿಸಲಿವೆ.

ಮೀರಠ್ ನಗರದ ದಕ್ಷಿಣ ಭಾಗದಿಂದ ಉತ್ತರ ಪ್ರದೇಶದ ಮೋದಿಪುರ ನಗರಕ್ಕೆ 23 ಕಿ.ಮೀ. ಉದ್ದದಲ್ಲಿ ಈ ಎರಡೂ ರೀತಿಯ ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಮೆಟ್ರೊ ರೈಲುಗಳಿಗಾಗಿ 13 ಸ್ಟೇಷನ್‌ಗಳಿವೆ. ಆರ್‌ಆರ್‌ಟಿಎಸ್‌ ರೈಲಿಗೆ ಮೂರು ನಿಲ್ದಾಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT