ADVERTISEMENT

ಇ.ಡಿಯಿಂದ ₹50 ಕೋಟಿ ಮೌಲ್ಯದ ಸ್ವತ್ತು ಜಪ್ತಿ;ಶರದ್‌ ಪವಾರ್ ಮೊಮ್ಮಗನಿಗೆ ಹಿನ್ನಡೆ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:02 IST
Last Updated 8 ಮಾರ್ಚ್ 2024, 16:02 IST
<div class="paragraphs"><p>ಇ.ಡಿ</p></div>

ಇ.ಡಿ

   

ಮುಂಬೈ: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ ಲಿಮಿಟೆಡ್‌ (ಎಂಎಸ್‌ಸಿಬಿ) ನಂಟಿನ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ್ ಸಹಕಾರಿ ಸಾಖರ್ ಕಾರ್ಖಾನಾ ಲಿಮಿಟೆಡ್‌ಗೆ (ಕೆಎಸ್‌ಎಸ್‌ಕೆ) ಸೇರಿದ ₹ 50 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಜಪ್ತಿ ಮಾಡಲಾಗಿರುವ ಸ್ವತ್ತುಗಳಲ್ಲಿ ಕೆಎಸ್‌ಎಸ್‌ಕೆಗೆ ಸೇರಿದ 101.30 ಎಕರೆ ಜಮೀನು, ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ಕಟ್ಟಡಗಳು ಸೇರಿವೆ.

ADVERTISEMENT

ಜಾರಿ ನಿರ್ದೇಶನಾಲಯದ ಈ ಕ್ರಮವು ಎಸ್‌ಸಿಪಿ (ಶರದ್‌ಚಂದ್ರ ಬಣ) ವರಿಷ್ಠ ಶರದ್ ಪವಾರ್‌ ಅವರ ಮೊಮ್ಮಗ, ರೋಹಿತ್‌ ಪವಾರ್‌ ಅವರಿಗೆ ಹಿನ್ಡಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರೋಹಿತ್‌ ಅವರು ಅಹ್ಮದ್‌ನಗರ ಜಿಲ್ಲೆಯ ಕರ್ಜತ್‌ ಜಾಮ್‌ಖೇಡ್‌ ಕ್ಷೇತ್ರದ ಶಾಸಕ.

ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ ಲಿಮಿಟೆಡ್‌, ಕಾನೂನುಬಾಹಿರವಾಗಿ ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಿದೆ. ಈ ಮಾರಾಟದಲ್ಲಿ ಹಣದ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ.

ಎಂಎಸ್‌ಸಿಬಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ, ಕನ್ನಡ್‌ ಸಹಕಾರಿ ಸಾಖರ್‌ ಕಾರ್ಖಾನೆಯನ್ನು ಬಾರಾಮತಿ ಅಗ್ರೊ ಪ್ರೈವೇಟ್‌ ಲಿಮಿಟೆಡ್ ಖರೀದಿಸಿದೆ. ರೋಹಿತ್‌ ಪವಾರ್‌ ಅವರು ಬಾರಾಮತಿ ಅಗ್ರೊ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ಆಗಿದ್ದಾರೆ. 

ಈ ಹಗರಣಕ್ಕೆ ಸಂಬಂಧಿಸಿ, ಇ.ಡಿ ಅಧಿಕಾರಿಗಳು ರೋಹಿತ್‌ ಪವಾರ್‌ ಅವರನ್ನು ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.