ADVERTISEMENT

ರಾಜ್ಯಸಭೆ ಪ್ರವೇಶಿಸಿದ ಕೊಂಕಣಿ!

22 ಪ್ರಾದೇಶಿಕ ಭಾಷೆ ಮಾತನಾಡಲು ಸದಸ್ಯರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 17:16 IST
Last Updated 18 ಜುಲೈ 2018, 17:16 IST

ನವದೆಹಲಿ(ಪಿಟಿಐ): ರಾಜ್ಯಸಭೆಯ ಸದಸ್ಯರು ಇನ್ನು ಮುಂದೆ ಕೊಂಕಣಿ, ಡೋಗ್ರಿ, ಕಾಶ್ಮೀರಿ, ಸಂಥಾಲಿ ಮತ್ತು ಸಿಂಧಿಯಂತಹ ಪ್ರಾದೇಶಿಕ ಭಾಷೆಗಳಲ್ಲೂ ರಾಜ್ಯಸಭೆಯಲ್ಲಿ ಮಾತನಾಡಬಹುದು.

ಈ ಮೊದಲು ಕನ್ನಡ ಸೇರಿದಂತೆ 17 ಭಾರತೀಯ ಭಾಷೆಗಳಲ್ಲಿ ಮಾತನಾಡಲು ಮಾತ್ರ ರಾಜ್ಯಸಭಾ ಸದಸ್ಯರಿಗೆ ಅವಕಾಶವಿತ್ತು.

ಆ ಪಟ್ಟಿಗೆ ಇದೀಗ ಐದು ಭಾಷೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ತಿಳಿಸಿದರು.

ADVERTISEMENT

ಇದರೊಂದಿಗೆ ರಾಜ್ಯಸಭೆಯಲ್ಲಿ 22 ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ಸದಸ್ಯರಿಗೆ ಅವಕಾಶ ದೊರೆತಂತಾಗಿದೆ.

ಆದರೆ, ಭಾಷಾಂತರಕಾರರ ನೇಮಕಕ್ಕೆ ಸದಸ್ಯರು ಮುಂಚಿತವಾಗಿ ರಾಜ್ಯಸಭಾ ಕಚೇರಿಗೆ ಮನವಿ ಸಲ್ಲಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.