ADVERTISEMENT

ಆರ್‌ಎಸ್‌ಎಸ್ ಏಕತೆಯನ್ನು ಬಯಸುತ್ತದೆ: ಸುನೀಲ್ ಅಂಬೇಕರ್‌

ಪಿಟಿಐ
Published 3 ಫೆಬ್ರುವರಿ 2026, 14:48 IST
Last Updated 3 ಫೆಬ್ರುವರಿ 2026, 14:48 IST
<div class="paragraphs"><p>ಸುನೀಲ್ ಅಂಬೇಕರ್‌</p></div>

ಸುನೀಲ್ ಅಂಬೇಕರ್‌

   

ಮುಂಬೈ: ವಿಶ್ವವಿದ್ಯಾಲಯದ ಅನುದಾನ ಆಯೋಗದ(ಯುಜಿಸಿ) ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಹಿರಿಯ ನಾಯಕರೊಬ್ಬರು, ‘ಸಮಾಜದಲ್ಲಿ ಏಕತೆ ಇರಬೇಕೆಂದು ಸಂಘ ಬಯಸುತ್ತದೆ. ಅದನ್ನು ಕಾಪಾಡಲು ಸಂಘ ಸದಾ ಬದ್ಧವಾಗಿಯೇ ಹೆಜ್ಜೆ ಇಡುತ್ತದೆ’ ಎಂದು ಹೇಳಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ಸಮಿತಿಯನ್ನು ರಚಿಸುವಂತೆ ಯುಜಿಸಿ ಅಧಿಸೂಚನೆ ಹೊರಡಿಸಿತ್ತು. ಈ ನಿಯಮಗಳು ಸಮಾಜದ ವಿಭಜನೆಗೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ADVERTISEMENT

ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್ಎಸ್‌ ಪಾತ್ರದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್, ‘ದೇಶದ ಸಾರ್ವಭೌಮತೆ ಮತ್ತು ಏಕತೆಗಾಗಿ ಆರ್‌ಎಸ್‌ಎಸ್‌ ಎನು ಮಾಡಿದೆ ಎಂಬುವುದನ್ನು ನೂರು ವರ್ಷ ಪೂರೈಸಿದ ಬಳಿಕವೂ ವಿವರಿಸುವ ಅಗತ್ಯವಿಲ್ಲ ಎಂದರು.

‘ಸಂಘ ದೇಶಕ್ಕಾಗಿ ಏನು ಮಾಡಿದೆಯೋ, ಅದೇ ಉದ್ದೇಶಕ್ಕಾಗಿಯೇ ಸ್ಥಾಪನೆಯಾಗಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.