ADVERTISEMENT

ಅಶ್ರಫ್ ಹತ್ಯೆ: ಆರ್‌ಎಸ್‌ಎಸ್‌–ಬಿಜೆಪಿ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 28 ಅಕ್ಟೋಬರ್ 2024, 16:12 IST
Last Updated 28 ಅಕ್ಟೋಬರ್ 2024, 16:12 IST
<div class="paragraphs"><p>ಕೋರ್ಟ್‌ ಆದೇಶ– ಪ್ರಾತಿನಿಧಿಕ ಚಿತ್ರ</p></div>

ಕೋರ್ಟ್‌ ಆದೇಶ– ಪ್ರಾತಿನಿಧಿಕ ಚಿತ್ರ

   

ತಿರುವನಂತಪುರ: ಸಿಪಿಎಂ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌–ಬಿಜೆಪಿಯ ನಾಲ್ವರು ಕಾರ್ಯಕರ್ತರಿಗೆ ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿಪಿಎಂ ಕಾರ್ಯಕರ್ತ ಸಿ. ಅಶ್ರಫ್ ಅವರನ್ನು ರಾಜಕೀಯ ವೈಷಮ್ಯದ ಕಾರಣಕ್ಕೆ 2011ರ ಮೇ 19ರಂದು ಕೊಲೆ ಮಾಡಲಾಗಿತ್ತು. ಎಂ. ಪ್ರನುಬಾಬು, ವಿ. ಶಿಜಿಲ್, ಆರ್.ವಿ. ನಿಧೀಶ್, ಕೆ. ಉಜೇಶ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅಪರಾಧಿಗಳಿಗೆ ತಲಾ ₹80 ಸಾವಿರ ದಂಡ ಕೂಡ ವಿಧಿಸಲಾಗಿದೆ. ಈ ಹಣವನ್ನು ಮೃತ ಅಶ್ರಫ್ ಅವರ ಕುಟುಂಬದ ಸದಸ್ಯರಿಗೆ ನೀಡಬೇಕಿದೆ.

ADVERTISEMENT

ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಎಂಟು ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ದೋಷಮುಕ್ತಗೊಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.