ADVERTISEMENT

ಆರ್‌ಎಸ್‌ಎಸ್‌ ಮಿಲಿಟರಿ ಸಂಘಟನೆಯಲ್ಲ; ಮೋಹನ್ ಭಾಗವತ್

ಪಿಟಿಐ
Published 28 ನವೆಂಬರ್ 2021, 15:52 IST
Last Updated 28 ನವೆಂಬರ್ 2021, 15:52 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ಗ್ವಾಲಿಯರ್: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮಿಲಿಟರಿ ಸಂಘಟನೆಯಲ್ಲ, ಇದು ಕೌಟುಂಬಿಕ ವಾತಾವರಣವಿರುವ ಒಂದು ಗುಂಪು’ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಭಾನುವಾರ ಹೇಳಿದರು.

ಸಂಘದ ಮಧ್ಯಭಾರತ ಪ್ರಾಂತ್ಯದ ನಾಲ್ಕು ದಿನಗಳ ಘೋಷ್ ಶಿವಿರ್‌ನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಘವು ಅಖಿಲ ಭಾರತ ಸಂಗೀತ ಶಾಲೆಯಲ್ಲ. ಸಮರ ಕಲೆಯ ಕಾರ್ಯಕ್ರಮಗಳು ಸಂಘದಲ್ಲಿ ಜರುಗುತ್ತವೆ. ಕೆಲವೊಮ್ಮೆ ಅದನ್ನು ಅರೆಸೇನಾ ಪಡೆಯೆಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಅದು ಸೇನಾ ಸಂಘಟನೆಯಲ್ಲ‘ ಎಂದರು.

‘ಪಾಶ್ಚಿಮಾತ್ಯ ದೇಶಗಳು ಸಂಗೀತವನ್ನು ಮನರಂಜನೆ ಎಂದು ಪರಿಗಣಿಸುತ್ತವೆ. ಅಲ್ಲಿ ಅದನ್ನು ರೋಮಾಂಚನಕ್ಕಾಗಿ ನುಡಿಸಲಾಗುತ್ತದೆ. ಆದರೆ ಭಾರತದಲ್ಲಿ ಸಂಗೀತವು ಆತ್ಮವನ್ನು ಸಂತುಷ್ಟಿಗೊಳಿಸುವ ಸಾಧನ, ನಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಕಲೆಯಾಗಿದೆ’ ಎಂದು ಅವರು ವ್ಯಾಖ್ಯಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.