ADVERTISEMENT

ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ: ಸುನೀಲ್‌ ಅಂಬೇಕರ್‌

ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆ ಪ್ರಯುಕ್ತ ಆಯೋಜನೆ

ಪಿಟಿಐ
Published 28 ಅಕ್ಟೋಬರ್ 2025, 15:36 IST
Last Updated 28 ಅಕ್ಟೋಬರ್ 2025, 15:36 IST
ಸುನೀಲ್‌ ಅಂಬೇಕರ್
ಸುನೀಲ್‌ ಅಂಬೇಕರ್   

ಜಬಲ್ಪುರ (): ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶತಮಾನೋತ್ಸವ ಆಚರಣೆ ಪ್ರಯುಕ್ತ ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ್‌ ಸುನೀಲ್‌ ಅಂಬೇಕರ್‌ ಮಂಗಳವಾರ ತಿಳಿಸಿದರು.

ಇಲ್ಲಿ ಅ.30ರಿಂದ ಆರಂಭವಾಗಲಿರುವ ಸಂಘದ ಅಖಿಲ ಭಾರತ ಕಾರ್ಯಕಾರಿ ಸಮಿತಿಯ ಮೂರು ದಿನಗಳ ವಾರ್ಷಿಕ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಪಂಚ ಪರಿವರ್ತನೆ, ಹಿಂದುತ್ವದ ವಿಸ್ತರಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸುವುದು ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸುವುದು ಈ ಸಮ್ಮೇಳನಗಳ ಮುಖ್ಯ ಉದ್ದೇಶವಾಗಿದೆ’ ಎಂದರು. 

ADVERTISEMENT

‘ಪಂಚ ಪರಿವರ್ತನೆ ಎಂಬುದು ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಕ್ರಮವಾಗಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಜ್ಞೆ, ನಾಗರಿಕ ಕರ್ತವ್ಯ, ಪರಿಸರ ಜಾಗೃತಿ ಹಾಗೂ ಸ್ವಾವಲಂಬನೆ ಮೂಲಕ ರಾಷ್ಟ್ರೀಯ ಪರಿವರ್ತನೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.