ADVERTISEMENT

ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್‌ | 3 ತಿಂಗಳಲ್ಲಿ ₹ 31,899 ಕೋಟಿ ವಂಚನೆ

ಪಿಟಿಐ
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
   

ಇಂದೋರ್‌: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್‌ಗಳ 2,480 ಪ್ರಕರಣಗಳಲ್ಲಿ ₹ 31,899 ಕೋಟಿ ಮೊತ್ತದ ವಂಚನೆ ನಡೆದಿದೆ. ಒಟ್ಟಾರೆ ವಂಚನೆಯ ಮೊತ್ತದಲ್ಲಿಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಪಾಲು ಶೇ 38ರಷ್ಟಿದೆ.

ಮಧ್ಯಪ್ರದೇಶದ ನೀಮುಚ್ ನಗರದ ಆರ್‌ಟಿಐ ಕಾರ್ಯಕರ್ತಚಂದ್ರಶೇಖರ್ ಗೌರ್‌ ಅವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ, ಆರ್‌ಬಿಐನ ಹಿರಿಯ ಅಧಿಕಾರಿಯೊಬ್ಬರಿಂದ ಈ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ವಂಚನೆ ಸ್ವರೂಪ ಮತ್ತು ಬ್ಯಾಂಕ್‌ ಅಥವಾ ಗ್ರಾಹಕರಿಗೆ ಎಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎನ್ನುವ ವಿವರಗಳನ್ನು ಆರ್‌ಬಿಐ ನೀಡಿಲ್ಲ. ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ,ಕಾರ್ಪೊರೇಷನ್‌ ಬ್ಯಾಂಕ್‌,ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌,ಸಿಂಡಿಕೇಟ್‌ ಬ್ಯಾಂಕ್‌,ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ,ಬ್ಯಾಂಕ್‌ ಆಫ್‌ ಇಂಡಿಯಾ,ಯೂಕೊ ಬ್ಯಾಂಕ್‌,ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಆಂಧ್ರ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಪಂಜಾಬ್‌ ಮತ್ತುಸಿಂಧ್‌ ಬ್ಯಾಂಕ್‌ಗಳಲ್ಲಿಯೂ ವಂಚನೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.