ADVERTISEMENT

ಉಕ್ರೇನ್ ಸಮೀಪದಿಂದ ಸೇನೆ ಹಿಂತೆಗೆದುಕೊಂಡ ರಷ್ಯಾ

ರಾಯಿಟರ್ಸ್
Published 15 ಫೆಬ್ರುವರಿ 2022, 14:20 IST
Last Updated 15 ಫೆಬ್ರುವರಿ 2022, 14:20 IST
ರಷ್ಯಾ ಸೇನೆ: ಎಎಫ್‌ಪಿ ಚಿತ್ರ
ರಷ್ಯಾ ಸೇನೆ: ಎಎಫ್‌ಪಿ ಚಿತ್ರ   

ಮಾಸ್ಕೊ: ಉಕ್ರೇನ್‌ನ ಸಮೀಪದಲ್ಲಿರುವ ರಷ್ಯಾದ ಮಿಲಿಟರಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಗಳನ್ನು ತಾಲೀಮು ಮುಗಿಸಿದ ಬಳಿಕ ತಮ್ಮ ನೆಲೆಗಳಿಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ. ಇದು ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಬಹುದು ಎನ್ನಲಾಗಿದೆ.

ದೇಶದಾದ್ಯಂತ ಸೇನಾಪಡೆಗಳ ಬೃಹತ್ ಯುದ್ಧ ತಾಲೀಮು ನಡೆಯುತ್ತಿದ್ದು, ದಕ್ಷಿಣ ಮತ್ತು ಪಶ್ಚಿಮ ಮಿಲಿಟರಿ ಜಿಲ್ಲೆಗಳ ಕೆಲವು ಘಟಕಗಳು ತಾಲೀಮನ್ನು ಮುಗಿಸಿದ್ದು ತಮ್ಮ ನೆಲೆಗೆ ವಾಪಸ್ ಆಗುತ್ತಿವೆ ಎಂದು ಸಚಿವಾಲಯ ತಿಳಿಸಿರುವುದಾಗಿ ರಷ್ಯಾದ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾ ದೇಶವು ಉಕ್ರೇನ್ ಗಡಿಯ ಬಳಿ 1 ಲಕ್ಷಕ್ಕೂ ಅಧಿಕ ಯೋಧರನ್ನು ನಿಯೋಜಿಸಿತ್ತು. ‌‌ಬೆಲಾರಸ್ ಜೊತೆ ನಡೆದ ಈ ಜಂಟಿ ತಾಲೀಮಿನಲ್ಲಿ ಬಹುತೇಕ ಉಕ್ರೇನ್ ದೇಶವನ್ನು ಸುತ್ತುವರಿಯಲಾಗಿತ್ತು. ಇದರಿಂದ, ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ರಷ್ಯಾದ ಈ ಆಕ್ರಮಣಕಾರಿ ನೀತಿ ಬಗ್ಗೆ ವಿಶ್ವದಾದ್ಯಂತ ಆಕ್ರೋಶ ಕೇಳಿಬಂದಿತ್ತು.

ADVERTISEMENT

ರಷ್ಯಾ ಆಕ್ರಮಣಕ್ಕೆ ಮುಂದಾದರೆ ಉಕ್ರೇನ್‌ಗೆ ಬೆಂಬಲ ನೀಡಲು ನ್ಯಾಟೊ ಪಡೆಗಳು ಮತ್ತು ಅಮೆರಿಕವು ಸೇನೆಯನ್ನು ಸಜ್ಜುಗೊಳಿಸಿದ್ದವು. ಬಳಿಕ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಅಧಿಕಾರಿಗಳ ಮಟ್ಟದ ಮಾತುಕತೆಯಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ರಷ್ಯಾ ಒಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.