ರಷ್ಯಾ ಸೇನೆ (ಪ್ರಾತಿನಿಧಿಕ ಚಿತ್ರ)
ಪಿಟಿಐ
ಚಂಡೀಗಢ: ವಿದ್ಯಾರ್ಥಿ ವೀಸಾ ಆಧಾರದಲ್ಲಿ ಕಳೆದ ವರ್ಷ ರಷ್ಯಾಕ್ಕೆ ತೆರಳಿದ್ದ ಪಂಜಾಬ್‌ನ ಮೊಗಾ ಜಿಲ್ಲೆಯ 25 ವರ್ಷದ ಯುವಕನನ್ನು ಅಲ್ಲಿನ ಸೇನೆಗೆ ನೇಮಿಸಿಕೊಂಡು, ರಷ್ಯಾ–ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಯುವಕನ ಕುಟುಂಬಸ್ಥರು ದೂರಿದ್ದಾರೆ.
ಬುಟಾ ಸಿಂಗ್ ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
‘ಭಾಷಾ ಕೋರ್ಸ್ ಕಲಿಕೆಗಾಗಿ 2024ರ ಅಕ್ಟೋಬರ್‌ನಲ್ಲಿ ಬುಟಾ ಸಿಂಗ್ ಅವರು ರಷ್ಯಾಕ್ಕೆ ತೆರಳಿದ್ದರು’ ಎಂದು ಅವರ ಸಹೋದರಿ ಕರಮ್‌ಜಿತ್ ಕೌರ್ ತಿಳಿಸಿದರು.
ಬುಟಾ ಅವರನ್ನು ರಷ್ಯಾಕ್ಕೆ ಕಳುಹಿಸಲು ಕುಟುಂಬದ ಬಳಿ ಇದ್ದ ಭೂಮಿಯಲ್ಲಿ ಅಲ್ಪ ಭಾಗವನ್ನು ಮಾರಾಟ ಮಾಡಿದ್ದೆವು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.