ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ಕೊಚ್ಚಿ: ಶಬರಿಮಲೆ ದೇವಾಲಯದ ಚಿನ್ನ ದುರುಪಯೋಗಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿ ಎಂದು ರಾಜ್ಯ ಪೊಲೀಸರಿಗೆ ಕೇರಳ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾ. ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ಪೀಠ, ದ್ವಾರಗಳ ಚೌಕಟ್ಟಿಗೆ ಚಿನ್ನಲೇಪನದ ವೇಳೆ ಚಿನ್ನ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬುದು ಈವರೆಗಿನ ವಿಚಾರಣೆಯಿಂದ ಕಂಡುಬರುತ್ತಿದೆ ಎಂಬುದನ್ನು ಗಮನಿಸಿದ ಬಳಿಕ ನಿರ್ದೇಶನ ನೀಡಿದೆ.
ಚಿನ್ನದ ಲೇಪನಕ್ಕೆ ಮುಂದಾದ ಪ್ರಾಯೋಜಕರು ಉನ್ನಿಕೃಷ್ಣನ್ ಪಾಟಿ ಅವರಿಗೆ ಭಾರಿ ಪ್ರಮಾಣದ ಚಿನ್ನವನ್ನು (ಸುಮಾರು 474.9 ಗ್ರಾಂ) ಹಸ್ತಾಂತರಿಸಲಾಗಿತ್ತು' ಎಂಬುದು ವಿಜಿಲೆನ್ಸ್ ವರದಿಯಿಂದ ತಿಳಿದುಬಂದಿದೆ ಎಂದಿರುವ ಪೀಠ, 'ಆದಾಗ್ಯೂ, ಪಾಟಿ ಅವರು ಅಷ್ಟು ಪ್ರಮಾಣದ ಚಿನ್ನವನ್ನು ತಿರುವಾಂಕೂರು ದೇವಸ್ವ ಮಂಡಳಿಗೆ (ಟಿಡಿಬಿ) ಒಪ್ಪಿಸಿದ್ದಾರೆ' ಎಂಬುದು ದಾಖಲೆಗಳಲ್ಲಿ ಇಲ್ಲ ಎಂದೂ ಪೀಠ ಹೇಳಿದೆ.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದ ಕೋರ್ಟ್, ದ್ವಾರಗಳ ಚೌಕಟ್ಟಿನಲ್ಲಿನ ಸಮಸ್ಯೆಗಳು ಇತರ ಎಲ್ಲ ಅಂಶಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.