ADVERTISEMENT

ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್‌ ಚಂದ್ರಶೇಖರ್‌

ಪಿಟಿಐ
Published 15 ಜನವರಿ 2026, 13:12 IST
Last Updated 15 ಜನವರಿ 2026, 13:12 IST
ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌   

ತಿರುವನಂತಪುರ/ನವದೆಹಲಿ (ಪಿಟಿಐ): ‘ಸಂಪ್ರದಾಯದ ಉಲ್ಲಂಘನೆಗಾಗಿ ಶಬರಿಮಲೆ ಮುಖ್ಯ ಅರ್ಚಕರನ್ನು ಬಂಧಿಸಿರುವುದಾದರೆ, ಅದಕ್ಕೂ ಮೊದಲು ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಬಂಧಿಸಬೇಕು’ ಎಂದು ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ಹೇಳಿದರು.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ 2018ರಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಉಲ್ಲಂಘನೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. 

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳವು (ಎಸ್‌ಐಟಿ) ಬಂಧಿಸಿರುವ ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರನ್ನು ಬಿಜೆಪಿ ರಕ್ಷಿಸುತ್ತಿಲ್ಲ. ನಾವು ಅಯ್ಯಪ್ಪ ಭಕ್ತರ ಮತ್ತು ಕೇರಳ ಜನರ ನಂಬಿಕೆಯನ್ನು ಮಾತ್ರ ರಕ್ಷಿಸುತ್ತಿದ್ದೇವೆ’ ಎಂದು ಚಂದ್ರಶೇಖರ್‌ ಹೇಳಿದರು.

ADVERTISEMENT

‘ತಪ್ಪು ಮಾಡಿದವರು ಜೈಲಿಗೆ ಹೋಗಬೇಕು. ಅರ್ಚಕರ ಬಂಧನದ ನಂತರ ಸಲ್ಲಿಸಿದ ರಿಮಾಂಡ್‌ ವರದಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಬೇಕಾದ ಆಧಾರವನ್ನು ಉಲ್ಲೇಖಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.