
ಪಿಟಿಐ
ಶಬರಿಮಲೆ
ತಿರುವನಂತಪುರ: ಶಬರಿಮಲೆಗೆ ಬರುವ ಭಕ್ತರು ಬುಧವಾರದಿಂದ ಪೂಜಾ ಸೇವೆಯನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು(ಬುಕ್ಕಿಂಗ್) ಎಂದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮಂಗಳವಾರ ತಿಳಿಸಿದೆ.
ವಸತಿ ವ್ಯವಸ್ಥೆಗೆ ‘ಸನ್ನಿಧಾನಂ’ ಕಟ್ಟಡದಲ್ಲಿನ ಕೊಠಡಿಗಳನ್ನೂ ಮುಂಗಡವಾಗಿ ಕಾಯ್ದಿರಿಸಬಹುದು. ಟಿಡಿಬಿ ವೆಬ್‌ಸೈಟ್ (www.onlinetdb.com) ಮೂಲಕ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಟಿಡಿಬಿ ಪ್ರಕಟಣೆ ತಿಳಿಸಿದೆ.
ಎರಡು ತಿಂಗಳ ಅವಧಿಯ ‘ಮಂಡಲಂ–ಮಕರವಿಳಕ್ಕು’ ದರ್ಶನವು ನವೆಂಬರ್ 17ರಿಂದ ಆರಂಭಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.