ADVERTISEMENT

ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜು: ಜ.20ರ ವರೆಗೆ ದೇವರ ದರ್ಶನಕ್ಕೆ ಅವಕಾಶ

ಪಿಟಿಐ
Published 30 ಡಿಸೆಂಬರ್ 2023, 13:55 IST
Last Updated 30 ಡಿಸೆಂಬರ್ 2023, 13:55 IST
   

ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜಾಗಿದ್ದು, ಶನಿವಾರ ಸಂಜೆ ದೇಗುಲದ ಬಾಗಿಲನ್ನು ತೆರೆಯಲಾಯಿತು.

ಮುಖ್ಯ ಅರ್ಚಕ ಪಿ.ಎನ್‌.ಮಹೇಶ್‌ ನಂಬೂದಿರಿ ಅವರು ತಂತ್ರಿ ಕಂಡರಾರು ಮಹೇಶ್‌ ಮೋಹನರಾರು ಅವರ ಉಪಸ್ಥಿತಿಯಲ್ಲಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆದರು. ಮಂಡಲ ಪೂಜೆ ಮುಕ್ತಾಯವಾದ ನಂತರ ಡಿಸೆಂಬರ್‌ 27ರಂದು ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು.

ಜ.15ರಂದು ನಡೆಯುವ ಮಕರವಿಳಕ್ಕು ಅಂಗವಾಗಿ ‘ಪ್ರಸಾದ ಶುದ್ಧ ಕ್ರಿಯೆ’ ಮತ್ತು ‘ಬಿಂಬ ಶುದ್ಧ ಕ್ರಿಯೆ’ ಮೊದಲಾದ ಧಾರ್ಮಿಕ ವಿಧಿಗಳು ಜನವರಿ 13 ಮತ್ತು 14ರಂದು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಮಕರವಿಳಕ್ಕು ದಿನದಂದು ‘ತಿರುವಾಭರಣ’ ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದಿದೆ.

ಮಕರವಿಳಕ್ಕು ದರ್ಶನದ ಬಳಿಕವೂ ಜನವರಿ 20ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.