ADVERTISEMENT

ಜಾಮೀನು ಷರತ್ತು ಉಲ್ಲಂಘನೆ: ಮತ್ತೆ ರಾಹುಲ್ ಈಶ್ವರ್ ಬಂಧನ

ಶಬರಿಮಲೆ ಹಿಂಸಾಚಾರ ಪ್ರಕರಣ

ಪಿಟಿಐ
Published 17 ಡಿಸೆಂಬರ್ 2018, 11:33 IST
Last Updated 17 ಡಿಸೆಂಬರ್ 2018, 11:33 IST
ರಾಹುಲ್ ಈಶ್ವರ್
ರಾಹುಲ್ ಈಶ್ವರ್   

ಪಾಲಕ್ಕಾಡ್: ಅಯ್ಯಪ್ಪ ಧರ್ಮಸೇನಾದ ನಾಯಕ ರಾಹುಲ್ ಈಶ್ವರ್‌ಗೆ ನೀಡಲಾಗಿದ್ದ ಜಾಮೀನನ್ನುಸ್ಥಳೀಯ ನ್ಯಾಯಾಲಯ ಹಿಂಪಡೆದ ಎರಡು ದಿನಗಳ ಬಳಿಕ, ಸೋಮವಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಈಶ್ವರ್ ಅವರನ್ನು ಬಂಧಿಸಿದ್ದನ್ನು ವಿಡಿಯೊ ಮಾಡಿಕೊಂಡ ಪೊಲೀಸರು ಬಳಿಕ ಅವರನ್ನು ನ್ಯಾಯಾಲಯದ ಎದುರು ಹಾಜರುಪ‍ಡಿಸಲುಪಟ್ಟನಂತಿಟ್ಟಕ್ಕೆ ಕರೆದೊಯ್ದಿದ್ದಾರೆ.

ಬಂಧನಕ್ಕೊಳಗಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್, ‘ಜಾಮೀನಿನ ಯಾವುದೇ ಷರತ್ತನ್ನೂ ಉಲ್ಲಂಘಿಸಿಲ್ಲ. ಹಿಂದು ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದೆ’ ಎಂದು ತಿಳಿಸಿದ್ದಾರೆ.

ADVERTISEMENT

ಈಶ್ವರ್ ಪ್ರತಿ ಶನಿವಾರ ಪಟ್ಟನಂತಿಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ಜಾಮೀನು ಷರತ್ತಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಡಿಸೆಂಬರ್ 8ರಂದು ಠಾಣೆಗೆ ಹಾಜರಾಗಲು ಅವರು ವಿಫಲರಾಗಿದ್ದರು. ಇದರಿಂದಾಗಿ ಜಾಮೀನು ರದ್ದುಪಡಿಸಿದ್ದ ನ್ಯಾಯಾಲಯ,ಅವರನ್ನು ಮರಳಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಎಲ್ಲ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಶಬರಿಮಲೆಯಲ್ಲಿ ನಡೆದ ಭಾರಿ ಪ್ರತಿಭಟನೆಯ ನೇತೃತ್ವವನ್ನು ರಾಹುಲ್ ವಹಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.