ದೌಸಾ (ರಾಜಸ್ಥಾನ): ಕಾಂಗ್ರೆಸ್ ನಾಯಕ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮ್ಮ ತಂದೆ ರಾಜೇಶ್ ಪೈಲಟರ್ ಅವರ ಪುಣ್ಯತಿಥಿಯ ಅಂಗವಾಗಿ ದೌಸಾದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾವೇಶ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸಮಾವೇಶಕ್ಕೂ ಮುನ್ನ ಪೈಲಟ್ ಮತ್ತು ಅವರ ಅನುಯಾಯಿಗಳು ದೌಸಾದಲ್ಲಿ ರಾಜೇಶ್ ಪೈಲಟ್ ಅವರಿಗೆ ಗೌರವ ಸಲ್ಲಿಸಿದರು. ನಂತರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ದೌಸಾ ಕಾರ್ಯಕ್ರಮ್ಕೆಕ ತೆರಳುವುದಕ್ಕೂ ಮುನ್ನ ಟ್ವೀಟ್ ಮಾಡಿರುವ ಪೈಲಟ್ ’ ನನ್ನ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರ ಕೆಲಸದ ಕರ್ಮಭೂಮಿಯೊಂದಿಗಿನ ಅವರ ಬಾಂಧವ್ಯ, ಸಾರ್ವಜನಿಕರೊಂದಿಗಿನ ಅವರ ಒಡನಾಟ, ಸಾರ್ವಜನಿಕ ಕಲ್ಯಾಣದೆಡೆಗಿನ ಅವರ ಸಮರ್ಪಿತ ಕಾರ್ಯಶೈಲಿ ನನ್ನ ಮಾರ್ಗದರ್ಶಿಯಾಗಿವೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವೆಂದು ಪರಿಗಣಿಸಿದ ಅವರು ತಮ್ಮ ತತ್ವಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರ ಚಿಂತನೆ ಮತ್ತು ಆದರ್ಶಗಳನ್ನು ಸದಾ ಅನುಸರಿಸುತ್ತೇನೆ’ ಎಂದು ಹೇಳಿದ್ದಾರೆ.
ಸಚಿನ್ ಪೈಲಟ್ ಅವರು ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಊಹಾಪೋಹಗಳೆದ್ದಿದ್ದು, ಆದರೆ, ಸಚಿನ್ ಪೈಲಟ್ ಅಂಥ ಯಾವುದೇ ಘೋಷಣೆಯನ್ನು ಸಮಾವೇಶದಲ್ಲಿ ಮಾಡಲಿಲ್ಲ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಆಡಳಿತದ ವಿರುದ್ಧ ತಿರುಗಿಬಿದ್ದಿರುವ ಪೈಲಟ್, ಕಾಂಗ್ರೆಸ್‌ನೊಂದಿಗೂ ಮುನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.