ಜೈಪುರ: ರಾಜಸ್ಥಾನ ವಿಧಾನಸಭೆ ಸ್ಪೀಕರ್ ನೀಡಿರುವ ಅನರ್ಹತೆಯ ನೋಟಿಸ್ ಅನ್ನು ಸಚಿನ್ ಪೈಲಟ್ ಬಣ ಗುರುವಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಸಚಿನ್ ಪೈಲಟ್ ಪರವಾಗಿ ಅವರ ಬೆಂಬಲಿಗ ಶಾಸಕ ಪೃಥ್ವಿರಾಜ್ ಮೀನಾ ಅವರು ನೋಟಿಸ್ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಪಕ್ಷ ವಿರೋಧಿ ಚಟವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ರಾಜಸ್ಥಾನ ಕಾಂಗ್ರೆಸ್ ಘಟಕವು ಸ್ಪೀಕರ್ ಸಿ.ಪಿ ಜೋಶಿ ಅವರಿಗೆ ದೂರು ನೀಡಿತ್ತು. ಇದೇ ಆಧಾರದಲ್ಲಿ ಸಚಿನ್ ಪೈಲಟ್ ಮತ್ತು ಅವರ ಜೊತೆ ಗುರುತಿಸಿಕೊಂಡಿರುವ 18 ಶಾಸಕರಿಗೆ ಬುಧವಾರ ಅನರ್ಹತೆಯ ನೋಟಿಸ್ ನೀಡಿರುವುದಾಗಿ ಸಿ.ಪಿ ಜೋಶಿ ಹೇಳಿದ್ದರು. ಶಾಸಕರು ಎರಡು ದಿನಗಳ ಒಳಗಾಗಿ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಾಕೀತು ಮಾಡಲಾಗಿತ್ತು.
ಈ ನೋಟಿಸ್ ವಿರುದ್ಧ ಸದ್ಯ ಪೈಲಟ್ ಬಣ ನ್ಯಾಯಾಲಯದ ಬಾಗಿಲು ತಟ್ಟಿದೆ. ಇಂದು ಮಧ್ಯಾಹ್ನ 3ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ. ವಕೀಲರಾದ ಹರೀಶ್ ಸಾಳ್ವೆ ಮತ್ತು ಮುಕುಲ್ ರೋಹ್ಟಗಿ ಅವರು ಪೈಲಟ್ ಬಣವನ್ನು ಕೋರ್ಟ್‌ನಲ್ಲಿ ಪ್ರತಿನಿಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.