ADVERTISEMENT

ಎಂಡಿಎಚ್‌ ‘ಸಾಂಬರ್‌ ಮಸಾಲ’ದಲ್ಲಿ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ: ಅಮೆರಿಕ ನಿಷೇಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 4:39 IST
Last Updated 12 ಸೆಪ್ಟೆಂಬರ್ 2019, 4:39 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಎಂಡಿಎಚ್‌ ‘ಸಾಂಬರ್‌ ಮಸಾಲ’ದಲ್ಲಿ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅದನ್ನು ನಿಷೇಧಿಸಿದೆ.

ಇದರಿಂದ ಕಂಪನಿಯೇ ತನ್ನ ಉತ್ಪನ್ನಗಳಲ್ಲಿ ಕನಿಷ್ಠ ಮೂರು ಉತ್ಪನ್ನಗಳನ್ನು ಅಮೆರಿಕ ಮಾರುಕಟ್ಟೆಯಿಂದ ಹಿಂಪಡೆದಿದೆ.

ಆರ್ ಪ್ಯೂರ್ ಆಗ್ರೋ ಸ್ಪೆಷಾಲಿಟೀಸ್ ಸಿದ್ಧಪಡಿಸಿದ್ದ ಹಾಗೂ ಹೌಸ್ ಆಫ್ ಸ್ಪೈಸಸ್ (ಇಂಡಿಯಾ) ಮಾರಾಟ ಮಾಡಿದ್ದ ಈ ಉತ್ಪನ್ನವನ್ನು ಎಫ್‌ಡಿಎ ಪರೀಕ್ಷೆಗೆ ಒಳಪಡಿಸಿತ್ತು. ಉತ್ಪನ್ನದಲ್ಲಿ ಸಾಲ್ಮೊನೆಲ್ಲ ಬ್ಯಾಕ್ಟೀರಿಯ ಇರುವುದು ಅದರಿಂದ ದೃಢಪಟ್ಟಿತು.

ADVERTISEMENT

ಬ್ಯಾಕ್ಟೀರಿಯಾ ಪತ್ತೆಯಾದ ಸಾಂಬಾರ್‌ ಮಸಾಲವನ್ನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಿತರಿಸಲಾಗಿತ್ತು ಎಂದು ಆನ್‌ಲೈನ್‌ ಮಾರಾಟ ಮಳಿಗೆ ಹೌಸ್‌ ಆಫ್‌ ಸ್ಪೈಸಸ್‌ ತಿಳಿಸಿತ್ತು. ಸದ್ಯ ಅಲ್ಲಿಂದ ಉತ್ಪನ್ನಗಳನ್ನು ವಾಪಸ್‌ ಪಡೆಯಲಾಗಿದೆ.

ಏನಿದು ಸಾಲ್ಮೊನೆಲ್ಲ?

ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ. ಆಹಾರಗಳ ಮೂಲಕ ಪಸರಿಸುವ ಸೋಂಕು ಇದಾಗಿದೆ. ಸಾಲ್ಮೊನೆಲ್ಲ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆ ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮ ಆರೋಗ್ಯ ಗಂಭೀರ ಸ್ಥಿತಿಗೂ ತಲುಪುತ್ತದೆ.

ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಇದೇ ಎಂದೇ ಅಮೆರಿಕ ಈಗಾಗಲೇ ಭಾರತದ ಸಾಕಷ್ಟು ಪದಾರ್ಥಗಳ ಆಮದನ್ನು ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.