ಲಖನೌ: ಹೋಳಿ ಆಚರಣೆ ವೇಳೆ ಮನೆಯ ಒಳಗೆ ಇರುವಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಕಳೆದ ವರ್ಷ ಸಂಭಲ್‌ನ ಮಸೀದಿಯ ಸಮೀಕ್ಷೆ ಕೈಗೊಂಡಿದ್ದ ವೇಳೆ ಹಿಂಸಾಚಾರ ನಡೆದು, ನಾಲ್ವರು ಮೃತಪಟ್ಟಿದ್ದರು. ಕೆಲವೇ ದಿನಗಳ ನಂತರ ಆಚರಿಸಲಾದ ಹೋಳಿಹಬ್ಬದ ಸಂದರ್ಭದಲ್ಲಿ, ‘ಹೋಳಿ ಹಬ್ಬವನ್ನು ವರ್ಷದಲ್ಲಿ ಒಂದು ಬಾರಿ ಆಚರಿಸಲಾಗುತ್ತದೆ. ಜುಮಾ(ಪ್ರಾರ್ಥನೆ) ಪ್ರತಿ ಶುಕ್ರವಾರ ಇರುತ್ತದೆ. ಹೀಗಾಗಿ, ಹೋಳಿ ಹಬ್ಬದ ದಿನ ಮುಸ್ಲಿಮರು ಮನೆ ಒಳಗೆ ಇರಬೇಕು‘ ಎಂದು ಚೌಧರಿ ಹೇಳಿದ್ದರು.
‘ಚೌಧರಿ ನೀಡಿರುವ ಹೇಳಿಕೆ ಸೇವಾ ನಿಯಮಗಳ ಉಲ್ಲಂಘನೆ’ ಎಂದು ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಚೌಧರಿ ವಿರುದ್ಧ ತನಿಖೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.