ADVERTISEMENT

ಸಂವಿಧಾನದಿಂದ ‘ಜಾತ್ಯತೀತ’ ಪದ ಕೈಬಿಡಲು ಸನಾತನ ಸಂಸ್ಥೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 13:51 IST
Last Updated 27 ಆಗಸ್ಟ್ 2018, 13:51 IST
ಚೇತನ್ ರಾಜಹನ್ಸ್
ಚೇತನ್ ರಾಜಹನ್ಸ್   

ಮುಂಬೈ: ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವಂತೆ ಸನಾತನ ಸಂಸ್ಥೆ ಸೋಮವಾರ ಆಗ್ರಹಿಸಿದೆ.

‘ಇದು ಮೊದಲೇನಲ್ಲ. ಬಹಳ ಹಿಂದಿನಿಂದಲೂ ನಾವು ಬೇಡಿಕೆ ಇಟ್ಟಿದ್ದೇವೆ. ಸಂವಿಧಾನದ ಅಡಿಯಲ್ಲೇ ಈ ಬೇಡಿಕೆ ಮಂಡಿಸಿದ್ದೇವೆ’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಹೇಳಿದ್ದಾರೆ.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾನತ ಸಂಸ್ಥೆ ಕೈವಾಡವಿರುವ ಶಂಕೆಯಿದೆ. ವಿಧ್ವಂಸಕ ಕೃತ್ಯಗಳಲ್ಲೂ ಕೈವಾಡವಿದೆ ಎಂಬ ಆರೋಪಗಳನ್ನು ಸನಾತನ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆಗಳು ಅಲ್ಲಗಳೆದಿವೆ.

ADVERTISEMENT

‘ಮಹಾರಾಷ್ಟ್ರ ಎಟಿಎಸ್ ಹಾಗೂ ಸಿಬಿಐ ಬಂಧಿಸಿರುವ ಒಂಬತ್ತು ಮಂದಿ ಸಂಸ್ಥೆಯ ಸದಸ್ಯರಲ್ಲ. ದೋಷಾರೋಪ ಪಟ್ಟಿಯಲ್ಲಿ ಸಂಸ್ಥೆಯ ಹೆಸರೂ ಉಲ್ಲೇಖವಾಗಿಲ್ಲ.ಸಂಸ್ಥೆ ನಿಷೇಧಕ್ಕೆ ಆಗ್ರಹಿಸುತ್ತಿರುವ ಕಾಂಗ್ರೆಸಿಗರು, ಕಮ್ಯುನಿಸ್ಟರು ಹಾಗೂ ಕೆಲವು ಬುದ್ಧಿಜೀವಿಗಳು ಇದನ್ನು ತಿಳಿದುಕೊಳ್ಳಬೇಕು’ ಎಂದು ರಾಜಹನ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.