ADVERTISEMENT

ಸಂಸದ್ ಟಿವಿ ಯೂಟ್ಯೂಬ್ ಚಾನಲ್ ಹ್ಯಾಕ್: 3 ಗಂಟೆ ಬಳಿಕ ಮರುಸ್ಥಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 10:51 IST
Last Updated 15 ಫೆಬ್ರುವರಿ 2022, 10:51 IST
   

ನವದೆಹಲಿ: ರಾಜ್ಯಸಭೆ ಮತ್ತು ಲೋಕಸಭೆ ಕಲಾಪವನ್ನು ನೇರ ಪ್ರಸಾರ ಮಾಡುವ ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ಅನ್ನು ಮಂಗಳವಾರ ಹ್ಯಾಕ್ ಮಾಡಲಾಗಿತ್ತು. ಬಳಿಕ, ಚಾನಲ್ ಹೆಸರನ್ನು ಎಥೆರಿಯಂ(Ethereum) ಎಂದು ಬದಲಾಯಿಸಲಾಗಿತ್ತು. ಎಥೇರಿಯಂ ಕ್ರಿಪ್ಟೋಕರೆನ್ಸಿಯ ಹೆಸರು.

ತಮ್ಮ ಯೂಟ್ಯೂಬ್ ಚಾನಲ್ ಹ್ಯಾಕರ್‌ಗಳ ದಾಳಿಗೆ ತುತ್ತಾಗಿರುವ ಬಗ್ಗೆ ಸಂಸದ ಟಿವಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಲಾಗಿದ್ದು, ನಮ್ಮ ಸಾಮಾಜಿಕ ಜಾಲತಾಣ ತಂಡವು ನಿರಂತರ ಪ್ರಯತ್ನ ನಡೆಸಿ ಬೆಳಗಿನ ಜಾವ 3.45ರ ಸುಮಾರಿಗೆ ಮರುಸ್ಥಾಪಿಸಲಾಗಿದೆ. ಭಾರತದಲ್ಲಿ ಸೈಬರ್ ಭದ್ರತೆ ಕುರಿತಾದ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಭಾರತೀಯ ಕಂಪ್ಯೂಟರ್ ತುರ್ತು ನಿರ್ವಹಣಾ ತಂಡವು ಹ್ಯಾಕಿಂಗ್ ಬಗ್ಗೆ ಸಂಸದ್ ಟಿವಿಗೆ ಮಾಹಿತಿ ನೀಡಿತ್ತು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣ ಈ ಚಾನಲ್ ಅನ್ನು ರದ್ದುಪಡಿಸಲಾಗಿದೆ ಎಂಬ ಸಂದೇಶ ಸಂಸದ್ ಚಾನಲ್‌ನಲ್ಲಿ ಬರುತ್ತಿತ್ತು. ಸಾಮಾಜಿಕ ಜಾಲತಾಣದಲ್ಲೂ ಸ್ಕ್ರೀನ್ ಶಾಟ್‌ಗಳು ಹರಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.