ADVERTISEMENT

ಶಾರದಾ ಚಿಟ್‌ ಫಂಡ್‌ ಹಗರಣ: ₹6 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಪಿಟಿಐ
Published 3 ಫೆಬ್ರುವರಿ 2023, 12:23 IST
Last Updated 3 ಫೆಬ್ರುವರಿ 2023, 12:23 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ, ಸಿಪಿಎಂ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್ ಮತ್ತು ಅಸ್ಸಾಂನ ಮಾಜಿ ಸಚಿವ ದಿವಂಗತ ಅಂಜನ್ ದತ್ತಾ ಒಡೆತನ ಕಂಪನಿಯ ಫಲಾನುಭವಿಗಳಿಗೆ ಸೇರಿದ₹ 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ₹3.30 ಕೋಟಿ ಚರಾಸ್ತಿ ಮತ್ತು ₹3 ಕೋಟಿ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ನಳಿನಿ ಚಿದಂಬರಂ, ದೇವವ್ರತ ಸರ್ಕಾರ್ (ಈಸ್ಟ್ ಬೆಂಗಾಲ್ ಕ್ಲಬ್ ಅಧಿಕಾರಿ), ದೇವೇಂದ್ರನಾಥ್ ಬಿಸ್ವಾಸ್ (ಸಿಪಿಎಂ ಮಾಜಿ ಶಾಸಕ) ಮತ್ತು ಅಸ್ಸಾಂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ದತ್ತಾ ಒಡೆತನದ ಅನುಭೂತಿ ಪ್ರಿಂಟರ್ಸ್ ಅಂಡ್ ಪಬ್ಲಿಕೇಷನ್ಸ್ ಫಲಾನುಭವಿಗಳ ಪಟ್ಟಿಯಲ್ಲಿ‌ ಸೇರಿದ್ದಾರೆ.

ADVERTISEMENT

‘ಈ ಕಂಪನಿ ಸಂಗ್ರಹಿಸಿದ ಒಟ್ಟು ಹಣದ ಪ್ರಮಾಣ ಸುಮಾರು ₹2,459 ಕೋಟಿಗಳಾಗಿದ್ದು, ಅದರಲ್ಲಿ ಸುಮಾರು ₹1,983 ಕೋಟಿ ಬಡ್ಡಿ ಮೊತ್ತ ಹೊರತುಪಡಿಸಿ ಇಲ್ಲಿಯವರೆಗೆ ಠೇವಣಿದಾರರಿಗೆ ಪಾವತಿಸಲಾಗಿಲ್ಲ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಜಾರಿ ನಿರ್ದೇಶನಾಲಯವು ಈವರೆಗೆ ಸುಮಾರು ₹ 600 ಕೋಟಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.