ADVERTISEMENT

ಸ್ನಾನಗೃಹದಲ್ಲಿ ಕುಸಿದು ಬಿದ್ದ ಎಎಪಿ ನಾಯಕ ಸತ್ಯೇಂದ್ರ ಜೈನ್‌: ಆಸ್ಪತ್ರೆಗೆ ದಾಖಲು

ಪಿಟಿಐ
Published 25 ಮೇ 2023, 5:59 IST
Last Updated 25 ಮೇ 2023, 5:59 IST
ಸತ್ಯೇಂದ್ರ ಜೈನ್‌
ಸತ್ಯೇಂದ್ರ ಜೈನ್‌   

ನವದೆಹಲಿ: ಎಎಪಿ ನಾಯಕ, ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರು ತಿಹಾರ್‌ ಜೈಲಿನ ಸ್ನಾನಗೃಹದಲ್ಲಿ ತಲೆತಿರುಗಿ ಬಿದ್ದಿದ್ದು, ಇಲ್ಲಿನ ದೀನ್‌ ದಯಾಳ್‌ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ ಅವರನ್ನು ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ.

‘ಸತ್ಯೇಂದ್ರ ಜೈನ್‌ ಅವರನ್ನು ದೀನ್‌ ದಯಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನಾನಗೃಹದಲ್ಲಿ ಅವರು ತಲೆತಿರುಗಿ ಬಿದ್ದಿದ್ದಾರೆ. ಈ ಹಿಂದೆ ಕೂಡ ಅವರ ಬಾತ್‌ರೂಮ್‌ನಲ್ಲಿ ಬಿದ್ದಿದ್ದರು. ಪರಿಣಾಮ ಅವರ ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿತ್ತು‘ ಎಂದು ಆಮ್‌ ಆದ್ಮೀ ಪಕ್ಷ ಹೇಳಿದೆ.

ADVERTISEMENT

ಸೋಮವಾರ ಅವರು ಅನಾರೋಗ್ಯದ ಕಾರಣ ಅವರು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.