ADVERTISEMENT

ಎಫ್‌ಐಆರ್ ರದ್ದತಿಗಾಗಿ ಸಲ್ಲಿಸಿದ್ದ ಫೋಕ್ಸ್‌ವ್ಯಾಗನ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ಕಾರ್‌ನಲ್ಲಿ ಕಳಪೆ ಸಾಧನ ಅಳವಡಿಸಿ ವಂಚನೆ – ಗ್ರಾಹಕರ ಆರೋಪ

ಪಿಟಿಐ
Published 26 ನವೆಂಬರ್ 2020, 9:40 IST
Last Updated 26 ನವೆಂಬರ್ 2020, 9:40 IST
ಸಾಂದರ್ಭಿಕ
ಸಾಂದರ್ಭಿಕ   

ನವದೆಹಲಿ: ಡೀಸೆಲ್‌ ಕಾರಿನಲ್ಲಿ ಕಳಪೆ ಸಾಧನ ಜೋಡಿಸಿ ವಂಚಿಸಲಾಗಿದೆ ಎಂದುಗ್ರಾಹಕರೊಬ್ಬರು ನೀಡಿದ ದೂರನ್ನು ಆಧರಿಸಿ ತಮ್ಮ ಕಂಪನಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಜರ್ಮನ್‌ ಕಾರು ತಯಾರಕಾ ಕಂಪನಿ ಸ್ಕೋಡ ಆಟೊ ಫೋಕ್ಸ್‌ವ್ಯಾಗನ್ ಇಂಡಿಯಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.

ಕಳಪೆ ಗುಣಮಟ್ಟ ಎಂದು ಆರೋಪಿಸುತ್ತಿರುವ ಆ ಸಾಧನ, ಒಂದು ತಂತ್ರಾಂಶವಾಗಿದ್ದು, ಅದನ್ನು ಆಟೊ ಎಂಜಿನ್‌ಗಳಲ್ಲಿ ಮಾಲಿನ್ಯ ಹೊರಸೂಸುವಿಕೆ ಪರೀಕ್ಷೆಯನ್ನು ಬದಲಿಸಲು ಬಳಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಜಾಗತಿಕವಾಗಿ ಫೋಕ್ಸ್‌ವ್ಯಾಗನ್‌ ಕಂಪನಿ ವಿರುದ್ಧ ಈ ಆರೋಪ ಹೊರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.