ADVERTISEMENT

ಪಾಲ್‌ಘರ್‌ ಪ್ರಕರಣ: ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂನಿಂದ ನೋಟಿಸ್‌ ಜಾರಿ

ಏಜೆನ್ಸೀಸ್
Published 11 ಜೂನ್ 2020, 7:21 IST
Last Updated 11 ಜೂನ್ 2020, 7:21 IST
ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾ
ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾ   

ನವದೆಹಲಿ: ಪಾಲ್‌ಘರ್‌ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಉತ್ತರ ಕೇಳಿ ಮಹಾರಾಷ್ಟ್ರ ಸರ್ಕಾರಕ್ಕೆಸುಪ್ರೀಂ ಕೋರ್ಟ್ ಗುರುವಾರ ನೋಟಿಸ್‌ ನೀಡಿದೆ.

ನೋಟಿಸ್ ನೀಡುವ ಸಂದರ್ಭ ಜುಲೈ ಎರಡನೇ ವಾರದಲ್ಲಿ ವಿಚಾರಣೆಯಾಗಬೇಕಿರುವ ವಿಷಯಗಳನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವು ಪಟ್ಟಿ ಮಾಡಿದೆ.

ಇಬ್ಬರು ಹಿಂದೂ ಸಾಧುಗಳು ಸೇರಿದಂತೆ ಮೂವರ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ಸರಿಯಾಗಿ ನಡೆಸುತ್ತಿಲ್ಲ. ಆ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ವಕೀಲ ಶಶಾಂಕ್‌ ಶೇಖರ್‌ ಜಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ADVERTISEMENT

ಅಶೋಕ್‌ ಭೂಷಣ್‌, ಎಂ.ಆರ್‌.ಶಾ ಮತ್ತು ವಿ.ರಾಮಸುಬ್ರಮಣಿಯನ್‌ ಅವರನ್ನು ಒಳಗೊಂಡ ಪೀಠವು ವರ್ಚುವಲ್ ಕೋರ್ಟ್ ನಂಬರ್ ಐದರಲ್ಲಿ ವಿಡಿಯೊ ಕಾನ್ಫರೆನ್ಸ್‌ಮೂಲಕ ಪ್ರಕರಣದ ವಿಚಾರಣೆ ನಡೆಸಿತು.

ರಾಷ್ಟ್ರವ್ಯಾಪಿ ಹೇರಿದ್ದ ಲಾಕ್‌ಡೌನ್‌ ಹೊರತಾಗಿಯೂ, ಪ್ರಕರಣ ನಡೆದ ಸ್ಥಳದಲ್ಲಿ ನೆರೆದಿದ್ದ ಜನರ ಗುಂಪಿನ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದೂ ಆರೋಪಿಸಲಾಗಿದೆ.

ಏಪ್ರಿಲ್‌‌ನಲ್ಲಿ ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಜನರ ಗುಂಪೊಂದು ದೊಣ್ಣೆಗಳಿಂದ ಹೊಡೆದುಹತ್ಯೆ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಸಿಐಡಿಗೆ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.