ADVERTISEMENT

ಇಂಟೆರ್‌ನೆಟ್‌ ದರ ನಿಯಂತ್ರಿಸಲು ಕೋರಿದ್ದ ಅರ್ಜಿ ವಜಾ

ಪಿಟಿಐ
Published 24 ಫೆಬ್ರುವರಿ 2025, 13:13 IST
Last Updated 24 ಫೆಬ್ರುವರಿ 2025, 13:13 IST
   

ನವದೆಹಲಿ: ‘ಇಂಟರ್‌ನೆಟ್‌ ದರವನ್ನು ನಿಯಂತ್ರಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ರಜತ್‌ ಎನ್ನುವವರು ಅರ್ಜಿ ಸಲ್ಲಿಸಿದ್ದರು. ‘ಇಂಟರ್‌ನೆಟ್‌ ಸೇವೆಗೆ ಸಂಬಂಧಿಸಿ ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಹಲವಾರು ಆಯ್ಕೆಗಳಿವೆ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಅವರಿದ್ದ ಪೀಠವು ಅರ್ಜಿಯನ್ನು ತಿರಸ್ಕರಿಸಿತು.

‘ಭಾರತದ ಅಂತರ್ಜಾಲ ಮಾರುಕಟ್ಟೆಯ ಬಹುಪಾಲನ್ನು ಜಿಯೊ ಮತ್ತು ರಿಲಯನ್ಸ್‌ ಕಂಪನಿಗಳೇ ನಿಯಂತ್ರಿಸುತ್ತಿವೆ’ ಎಂದು ಅರ್ಜಿದಾರರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಕಂಪನಿಗಳು ಮಾರುಕಟ್ಟೆಯ ಬಹುಪಾಲನ್ನು ನಿಯಂತ್ರಿಸಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ನಿಮಗೆ ಅನ್ನಿಸುತ್ತಿದ್ದರೆ, ನೀವು ಸ್ಪರ್ಧಾ ಆಯೋಗಕ್ಕೆ ದೂರು ನೀಡಿ’ ಎಂದು ಹೇಳಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.