ADVERTISEMENT

ಸಿಎಪಿಎಫ್‌ ‘ಸಿಬ್ಬಂದಿ ಶ್ರೇಣಿ ಪರಿಶೀಲನೆ’ಗೆ ಸುಪ್ರೀಂ ಕೋರ್ಟ್‌ ಆದೇಶ

ಪಿಟಿಐ
Published 24 ಮೇ 2025, 13:43 IST
Last Updated 24 ಮೇ 2025, 13:43 IST
<div class="paragraphs"><p>ಸಿಎಪಿಎಫ್‌ ಸಿಬ್ಬಂದಿಯ ಪಥಸಂಚಲನ </p></div>

ಸಿಎಪಿಎಫ್‌ ಸಿಬ್ಬಂದಿಯ ಪಥಸಂಚಲನ

   

– ಸಂಗ್ರಹ ಚಿತ್ರ

ನವದೆಹಲಿ: 2021ರಲ್ಲೇ ನಡೆಯಬೇಕಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್‌) ‘ಸಿಬ್ಬಂದಿ ಶ್ರೇಣಿ ಪರಿಶೀಲನಾ’ ಕಾರ್ಯವನ್ನು ಆರು ತಿಂಗಳಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

ಇದರ ಅನ್ವಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಐಟಿಬಿಪಿ, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸಿಐಎಸ್‌ಎಫ್‌ ಮತ್ತು ಎಸ್‌ಎಸ್‌ಬಿಯ ‘ಸಿಬ್ಬಂದಿ ಶ್ರೇಣಿ ಪರಿಶೀಲನಾ’ ಕಾರ್ಯ ನಡೆಯಬೇಕಿದೆ.

ಸಿಬ್ಬಂದಿ ಶ್ರೇಣಿ ಪರಿಶೀಲನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಕ್ರಮ ಕೈಗೊಂಡ ವರದಿ ನೀಡಿದ ಮೂರು ತಿಂಗಳಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ, ಈಗ ಜಾರಿಯಲ್ಲಿರುವ ಸೇವಾ ನಿಯಮಗಳು ಮತ್ತು ನೇಮಕಾತಿ ನಿಯಮಗಳ ಬಗ್ಗೆ ಅವಲೋಕನ ನಡೆಸಬೇಕಿದೆ.

ದೇಶದ ಗಡಿಗಳಲ್ಲಿ ಭದ್ರತೆಯನ್ನು ಕಾಪಾಡುವಲ್ಲಿ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಿಎಪಿಎಫ್‌ನ ಹೊಣೆಯು ಮಹತ್ವದ್ದು ಎಂದು ನ್ಯಾಯಾಲಯ ಹೇಳಿದೆ.

ಸಿಎಪಿಎಫ್ ಸಿಬ್ಬಂದಿಯು ಬಹಳ ಸವಾಲಿನ ಪರಿಸ್ಥಿತಿಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ಉನ್ನತ ಶ್ರೇಣಿಗಳಿಗೆ ಅಧಿಕಾರಿಗಳನ್ನು ಬೇರೆ ಕಡೆಗಳಿಂದ ನೇರವಾಗಿ ನೇಮಕ ಮಾಡಿಕೊಳ್ಳುವುದರ ಪರಿಣಾಮವಾಗಿ ತಮಗೆ ಸಕಾಲದಲ್ಲಿ ಬಡ್ತಿ ಸಿಗುತ್ತಿಲ್ಲ ಎಂಬ ಆಕ್ಷೇಪ ಸಿಎಪಿಎಫ್‌ ಸಿಬ್ಬಂದಿಯದ್ದಾಗಿದೆ ಎಂದು ಅದು ಹೇಳಿದೆ.

‘ಈ ಸಶಸ್ತ್ರ ಪಡೆಗಳ ಸಿಬ್ಬಂದಿಯ ಸ್ಥಿತಿ ನಿಂತ ನೀರಿನಂತೆ ಆಗಿದೆ. ಇದು ಅವರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಉಂಟುಮಾಡಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.