ADVERTISEMENT

ಜಾಮೀನು ರಹಿತ ವಾರಂಟ್‌: ಸುರ್ಜೆವಾಲಾಗೆ ತಾತ್ಕಾಲಿಕ ರಕ್ಷಣೆ

ಪಿಟಿಐ
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ರಣದೀಪ್‌ ಸಿಂಗ್‌ ಸುರ್ಜೆವಾಲಾ
ರಣದೀಪ್‌ ಸಿಂಗ್‌ ಸುರ್ಜೆವಾಲಾ   

ನವದೆಹಲಿ: 23 ವರ್ಷ ಹಳೆಯ ಕ್ರಿಮಿನಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್ ಸುರ್ಜೆವಾಲಾರಿಗೆ ಸಂಸದ, ಶಾಸಕರ ಕೋರ್ಟ್ ಜಾಮೀನುರಹಿತ ವಾರಂಟ್‌ ಜಾರಿಗೊಳಿಸುವುದಿಂದ ಸುಪ್ರೀಂ ಕೋರ್ಟ್ ‘ರಕ್ಷಣೆ’ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, ವಾರಂಟ್‌ ಜಾರಿ ರದ್ದತಿ ವಿರುದ್ಧ ಐದು ವಾರಗಳಲ್ಲಿ ವಾರಾಣಸಿಯ ಸಂಸದ, ಶಾಸಕರ ಕೋರ್ಟ್‌ನ ವಿಶೇಷ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು.

ಅಲ್ಲಿಯವರೆಗೆ ವಾರಂಟ್ ಜಾರಿಗೊಳಿಸಬಾರದು ಎಂದು ಪೀಠ ಸೂಚಿಸಿತು. ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರು ಪೀಠದ ಇತರ ಸದಸ್ಯರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.