ADVERTISEMENT

ಸಿಬಿಐ ತನಿಖೆಗೆ ರಾಜ್ಯಗಳ ಒಪ್ಪಿಗೆ ಕಡ್ಡಾಯ: ‘ಸುಪ್ರೀಂ’

ಪಿಟಿಐ
Published 20 ನವೆಂಬರ್ 2020, 3:29 IST
Last Updated 20 ನವೆಂಬರ್ 2020, 3:29 IST
ಸಿಬಿಐ
ಸಿಬಿಐ   

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ)ರಾಜ್ಯಗಳ ವ್ಯಾಪ್ತಿಯಲ್ಲಿ ತನಿಖೆ ನಡೆಸಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟವಾಗಿ ಹೇಳಿದೆ.

ಈ ನಿಯಮವು ದೇಶದ ಒಕ್ಕೂಟ ವ್ಯವಸ್ಥೆಗೆ ಅನುಗುಣವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಬಿ. ಆರ್.ಗವಾಯಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಶೇಷ ಪೊಲೀಸ್‌ ಪಡೆಯ ಅಧಿಕಾರ ಮತ್ತು ಅಧಿಕಾರ ವ್ಯಾಪ್ತಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವ ಹಾಗೂ ಈ ಅಧಿಕಾರ ಚಲಾವಣೆಗೆ ರಾಜ್ಯ ಸರ್ಕಾರಗಳ ಅನುಮತಿಗೆ ಸಂಬಂಧಿಸಿದ ನಿಯಮಗಳು ಈ ಸೆಕ್ಷನ್‌ಗಳಲ್ಲಿ ಇವೆ.

ಕೇಂದ್ರಾಡಳಿತ ಪ್ರದೇಶದಿಂದ ಡಿಎಸ್‌ಪಿಇಯ ಅಧಿಕಾರ ಮತ್ತು ಅಧಿಕಾರ ವ್ಯಾಪ್ತಿಯನ್ನು ರಾಜ್ಯಗಳಿಗೆ ವಿಸ್ತರಿಸಲು ಸೆಕ್ಷನ್‌ 5 ಕೇಂದ್ರಕ್ಕೆ ಅವಕಾಶ ಒದಗಿಸುತ್ತದೆ. ಆದರೆ, ಇಂತಹ ವಿಸ್ತರಣೆಗೆ ರಾಜ್ಯದ ಅನುಮತಿ ಕಡ್ಡಾಯ ಎಂಬುದನ್ನು ಸೆಕ್ಷನ್‌ 6 ಸ್ಪಷ್ಟಪಡಿಸುತ್ತದೆ ಎಂದು ಪೀಠವು ಹೇಳಿದೆ. ರಾಜ್ಯ ಸರ್ಕಾರಗಳಿಂದ ಪೂರ್ವಾನುಮತಿ ಪಡೆಯದೇ ಸಿಬಿಐ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿ, ಭ್ರಷ್ಟಾಚಾರ ಪ್ರಕ
ರಣದ ಆರೋಪ ಹೊತ್ತಿರುವ ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ಇನ್ನಿತರರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಛತ್ತೀಸಗಡ ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಇತ್ತೀಚೆಗೆ ಹಿಂದಕ್ಕೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.