ADVERTISEMENT

ಅಯೋಧ್ಯೆ: ವಿಚಾರಣೆಗೆ ಸಂವಿಧಾನ ಪೀಠ

ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆ ಜ. 10 ರಂದು

ಪಿಟಿಐ
Published 8 ಜನವರಿ 2019, 19:13 IST
Last Updated 8 ಜನವರಿ 2019, 19:13 IST
   

ನವದೆಹಲಿ:ಅಯೋಧ್ಯೆ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವನ್ನು ಮಂಗಳವಾರ ರಚನೆ ಮಾಡಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ.ಬೊಬ್ಡೆ, ಎನ್‌.ವಿ.ರಮಣ, ಯು.ಯು.ಲಲಿತ್‌, ಡಿ.ವೈ.ಚಂದ್ರಚೂಡ್‌ ಅವರು ಇರುವಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಜನವರಿ 10ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಸಂವಿಧಾನ ಪೀಠ ರಚಿಸಿರುವುದು ಹಾಗೂ ಜ. 10 ರಂದು ವಿಚಾರಣೆ ನಡೆಸುವುದನ್ನು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿ 10 ರಂದು ಮುಂದಿನ ಆದೇಶವನ್ನು ಸೂಕ್ತ ಪೀಠವು ನೀಡಲಿದೆ ಎಂದು ಸುಪ್ರೀಂ ಕೋರ್ಟ್‌ ಇದೇ 4 ರಂದು ಹೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.